

ಭಾಲ್ಕಿ: ವಿದ್ಯಾರ್ಥಿ ದಿಸೆಯಿಂದಲೇ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ಇದು ಭವಿಷ್ಯದಲ್ಲಿ ಉತ್ತಮ ನಾಗರಿಕರನ್ನಾಗಲು ಪ್ರೇರೇಪಿಸುತ್ತದೆ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟz್ದÉÃವರು ನುಡಿದರು.
ಕರಡ್ಯಾಳ ಚನ್ನಬಸವೇಶ್ವರ ಗುರುಕುಲ ಪಬ್ಲಿಕ್ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟಿçÃಯ ಕ್ರೀಡಾ ದಿನ ಮತ್ತು 2024-25ನೆಯ ಸಾಲಿನ ವಿದ್ಯಾರ್ಥಿ ನಾಯಕರ ಅಧಿಕಾರ ಸ್ವೀಕಾರ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಕಲೆ, ಕ್ರೀಡೆ, ಸಾಂಸ್ಕೃತಿಕ ಸೇರಿ ವಿವಿಧ ಕೌಶಲಗಳನ್ನು ಬೆಳೆಸಿಕೊಂಡಲ್ಲಿ ಭವಿಷ್ಯದಲ್ಲಿ ಎಂತಹ ಸವಾಲುಗಳನ್ನು ಸರಾಗವಾಗಿ ಬಗೆಹರಿಸಿಕೊಳ್ಳಬಹುದು. ವಿವಿಧ ಕ್ಷೇತ್ರಗಳಲ್ಲಿ ಬೆಳವಣಿಗೆಗೆ ಸಹಕಾರಿ ಆಗುತ್ತದೆ ಎಂದರು.
ಹಾಕಿ ಮಾಂತ್ರಿಕ ಎಂದೇ ಕರೆಸಿಕೊಳ್ಳುವ ಧ್ಯಾನ್ ಚಂದ್ ಅವರು ವಿವಿಧ ಒಲಿಂಪಿಕ್ ಆವೃತ್ತಿಯಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೆ ಬಹುದೊಡ್ಡ ಗೌರವ ತಂದು ಕೊಟ್ಟಿದ್ದಾರೆ. ಅವರು ತಮ್ಮ 22ವರ್ಷಗಳ ಕ್ರೀಡಾ ಬದುಕಿನಲ್ಲಿ 400ಕ್ಕೂ ಹೆಚ್ಚು ಗೋಲುಗಳನ್ನು ಗಳಿಸಿದ್ದಾರೆ. ಆ ಕಾರಣಕ್ಕಾಗಿಯೇ ಅವರ ಸ್ಮರಣಾರ್ಥ ರಾಷ್ಟಿçÃಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ನೆನಪಿಸಿದರು.
ನವನೀತ್ ಸಿಂಗ್ ಮಾತನಾಡಿದರು. ಸಂಸ್ಥೆಯ ಆಡಳಿತಾಧಿಕಾರಿ ಮೋಹನ ರೆಡ್ಡಿ, ಪ್ರಾಚಾರ್ಯ ಬಸವರಾಜ ಮೊಳಕೀರೆ, ಆಶಾ ಮುದಾಳೆ, ಅಂಜಲಿ ಜೋಶಿ, ಶಶಿಕುಮಾರ, ಪ್ರಶಾಂತ ರೆಡ್ಡಿ ಇತರರಿದ್ದರು. ಪ್ರಾಚಾರ್ಯ ಎನ್.ರಾಜು ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಸಾನ್ವಿ, ಸಮೃದ್ದಿ ನಿರೂಪಣೆ ಮಾಡಿದರು. ಸುಮಿತ ವಂದಿಸಿದರು.
ನಾಲ್ಕು ತಂಡ ರಚನೆ: ಚನ್ನಬಸವೇಶ್ವರ ಗುರುಕುಲ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿ ದಿಸೆಯಿಂದಲೇ ಲೀಡರ್‌ಶಿಪ್ ಗುಣ ಬೆಳೆಸಲು ತಂಡಗಳನ್ನು ರಚಿಸಲಾಗಿದೆ. ಬಸವಣ್ಣ, ಚನ್ನಬಸವಣ್ಣ, ಅಲ್ಲಮಪ್ರಭು ಮತ್ತು ಸಿದ್ದರಾಮೇಶ್ವರ ಶರಣರ ಹೆಸರಿನಲ್ಲಿ ನಾಲ್ಕು ತಂಡಗಳನ್ನು ರಚಿಸಿ ನಾಯಕ ಮತ್ತು ಉಪ ನಾಯಕ, ಸದಸ್ಯರಗಳನ್ನು ಆಯ್ಕೆ ಮಾಡಿ ಶಾಲಾ ಹಂತದಲ್ಲಿ ವಿವಿಧ ಜವಾಬ್ದಾರಿ ವಹಿಸಲಾಗಿದೆ. ಬಸವಣ್ಣ ತಂಡದ ನಾಯಕರಾಗಿ ಸಂಕೇತ, ಶಿವಾನಿ, ಚನ್ನಬಸವಣ್ಣ ತಂಡದ ನಾಯಕರಾಗಿ ಬಸವಪ್ರಣವ, ಪಿಯುಷಾ, ಅಲ್ಲಮಪ್ರಭು ತಂಡದ ನಾಯಕರಾಗಿ ಶಶಾಂಕ, ಸ್ವಾತಿ ಮತ್ತು ಸಿದ್ದರಾಮೇಶ್ವರ ತಂಡದ ನಾಯಕರಾಗಿ ಸುಮಿತ, ಸಾಕ್ಷಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಾಚಾರ್ಯ ಎನ್.ರಾಜು ತಿಳಿಸಿದರು.