ವಿದ್ಯಾರ್ಥಿಗಳಲ್ಲಿರಲಿ ಜ್ಞಾನದ ದಾಹ

KDR collega
ಅಜ್ಜಂಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆ ಕಾರ್ಯಕ್ರಮವನ್ನು ಕವಿ ಗುರುರಾಜ್ ಹಾಲ್ಮಠ್ ಉದ್ಘಾಟಿಸಿದರು. ರಾಜಣ್ಣ, ಶಿವಮೂರ್ತಿ, ಎ.ಸಿ. ಚಂದ್ರಪ್ಪ ಇತರರಿದ್ದರು.
Published on

ಕಡೂರು: ವಿದ್ಯಾರ್ಥಿಗಳಲ್ಲಿ ಜ್ಞಾನದ ದಾಹ ಇರಬೇಕು. ಸತ್ಯನಿಷ್ಠೆ, ಪ್ರಾಮಾಣಿಕತೆ, ಸಮಯಪಾಲನೆ ರೂಢಿಸಿಕೊಳ್ಳುವುದರ ಮೂಲಕ ಸಮಾಜಕ್ಕೆ ಆಸ್ತಿಯಾಗಬೇಕಿದೆ ಎಂದು ಕವಿ ತರೀಕೆರೆ ಗುರುರಾಜ್ ಹಾಲ್ಮಠ್ ತಿಳಿಸಿದರು.

ಅಜ್ಜಂಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ, ಯೂತ್ ರೆಡ್ ಕ್ರಾಸ್, ರೋವರ್ಸ್‌ ಆ್ಯಂಡ್ ರೇಂಜರ್ಸ್‌ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಹಾಗೂ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.

ಅವರು ರಚಿಸಿದ ಕವಿತೆಗಳನ್ನು ವಾಚಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ಗುರು-ಶಿಷ್ಯರ ಸಂಬಂಧ, ಸಾಮಾಜಿಕ ಅಸಮಾನತೆ, ಆರೋಗ್ಯ ಮೊದಲಾದ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸಿದರು.

ಸಾಂಸ್ಕೃತಿಕ ಘಟಕದ ಸಂಚಾಲಕ ಡಾ. ಎಸ್.ಎನ್.ಆನಂದ, ರಂಗ ಸಂಘಟಕ ಎ.ಸಿ.ಚಂದ್ರಪ್ಪ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಎಚ್.ಗುರುಮೂರ್ತಿ, ಪ್ರಾಚಾರ್ಯ ಕೆ.ರಾಜಣ್ಣ ಮಾತನಾಡಿದರು.

ವರ್ಗಾವಣೆಗೊಂಡ ಕನ್ನಡ ಸಹಾಯಕ ಪ್ರಾಧ್ಯಾಪಕ ಇ.ಮಹಾಲಿಂಗಪ್ಪ ಅವರನ್ನು ಬೀಳ್ಕೊಡಲಾಯಿತು. ಕಾಲೇಜಿಗೆ ಹೊಸದಾಗಿ ಬಂದ ಸತೀಶ್, ಮಂಜುನಾಥ್, ಮುಸ್ತಫ್ ಮುಂಡರಗಿ ಅವರನ್ನು ಸ್ವಾಗತಿಸಲಾಯಿತು. ಗೊ.ರು.ಚನ್ನಬಸಪ್ಪ ಅವರನ್ನು ಪರಿಚಯಿಸುವ ಭಿತ್ತಿಪತ್ರ, ಕಾಲೇಜಿನ ಸಾಹಿತ್ಯ ಸಂಗಾತಿ ಮಾಸ ಪತ್ರಿಕೆ ಅನಾವರಣಗೊಳಿಸಲಾಯಿತು. ಕಾಲೇಜಿನಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಪತ್ರಾಂಕಿತ ವ್ಯವಸ್ಥಾಪಕ ಬಿ.ಎಲ್.ಶಿವಮೂರ್ತಿ, ಕಾಲೇಜಿನ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net