ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಗುರುತಿಸಿ

28ydg05
Published on

ಯಾದಗಿರಿ: ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ವಿದ್ಯಾರ್ಥಿಗಳು ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳುವ ಅವಶ್ಯಕತೆ ಇದೆ ಎಂದು ಶಾಸಕ ಶರಣಗೌಡ ಕಂದಕೂರ ತಿಳಿಸಿದರು.

ಪಟ್ಟಣದ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಗುರುಮಠಕಲ್ ಮತ್ತು ಕೊಂಕಲ್ ಹೋಬಳಿ ಮಟ್ಟದ ಪ್ರಾಥಮಿಕ ಹಾಗು ಪ್ರೌಢಶಾಲೆ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಶಿಕ್ಷಕರು ಗುರುತಿಸಬೇಕು.

ಕ್ರೀಡೆಗಳು ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿವೆ. ಅಲ್ಲದೆ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಸದೃಢಗೊಳ್ಳಬೇಕಾದರೆ ಕ್ರೀಡೆಗಳು ಬೇಕು ಎಂದರು.

ಕ್ಷೇತ್ರ ಶಿಕ್ಷಣಾಕಾರಿ ಮಲ್ಲಿಕಾಜರ್ುನ ಪೂಜಾರಿ ಮಾತನಾಡಿ, ವಿದ್ಯಾರ್ಥಿಗಳು ಸೋಲು-ಗೆಲುವು ಸಮಾನವಾಗಿ ಸ್ವೀಕರಿಸಿಬೇಕು. ಇಂದು ಸೋತವರು ನಾಳೆ ಗೆಲುವಿನ ದಡ ತಲುಪುತ್ತಾರೆ. ಸದಾ ಪ್ರಯತ್ನಶೀಲರಾಗಿರಬೇಕು ಎಂದು ಕಿವಿಮಾತು ಹೇಳಿದರು.

ತಹಸೀಲ್ದಾರ್ ಮಹಮ್ಮದ್ ಮೋಸಿನ್ ಅಹ್ಮದ್, ತಾಪಂ ಇಒ ಎಸ್.ಎಸ್ ಖಾದ್ರೊಳ್ಳಿ, ಪುರಸಭೆ ಮುಖ್ಯಾಕಾರಿ ಭಾರತಿ ದಂಡೋತಿ, ಮಲ್ಲಿಕಾಜರ್ುನ ಪುಜಾರಿ, ಸಕರ್ಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಸಂತೋಷ ಕುಮಾರ್ ನೀರೆಟಿ, ವೈದ್ಯಾಕಾರಿ ಡಾ.ಶಿವಪ್ರಸಾದ ಮೈತ್ರಿ, ನಾರಾಯಣರೆಡ್ಡಿ, ಅನಿಲ್ ಕುಮಾರ್, ಪುರಸಭೆ ಮಾಜಿ ಅಧ್ಯಕ್ಷ ಪಾಪಣ್ಣ ಮನ್ನೆ, ಪ್ರಮುಖರಾದ ಜಿ.ತಮ್ಮಣ್ಣ, ಪ್ರಕಾಶ ನೀರೆಟ, ಕಿಷ್ಟಾರೆಡ್ಡಿ, ಆಶನ್ನ ಬುದ್ದ, ಬಾಲಪ್ಪ ದಾಸರಿ, ಸೀರಾಜ್ ಚಿಂತಕುಂಟಿ, ಅಶೊಕ್ ಕಲಾಲ್, ಲಿಂಗನಂದ ಗೊಗಿ, ಭೀಮಪ್ಪ, ಆಂಜಿನೇಯಲು, ವಿಜಯಕುಮಾರ್, ಯಲ್ಲಪ್ಪ ಯಾದವ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net