ವಿದ್ಯಾರ್ಥಿಗಳಲ್ಲಿನ ಕಲೆ, ಸಾಮರ್ಥ್ಯ ಗುರುತಿಸಿ

PH 03
Published on

ವಾಡಿ: ತೀರ್ಪುಗಾರರು ಮಕ್ಕಳಲ್ಲಿರುವ ಕಲೆ ಮತ್ತು ಸಾಮರ್ಥ್ಯವನ್ನು ಸೂಕ್ಷö್ಮವಾಗಿ ಗಮನಿಸಿ ಅರ್ಹರನ್ನು ಆಯ್ಕೆ ಮಾಡಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಬಳುಂಡಗಿ ಹೇಳಿದರು.

ಸರಸ್ವತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರಿ, ಖಾಸಗಿ ಶಾಲೆ ಎಂದು ತಾರತಮ್ಯ ಮಾಡದೆ ಪ್ರತಿಭೆಗಳಿಗೆ ಮಾನ್ಯತೆ ಕೊಡಬೇಕು ಎಂದರು.

ಚಿತ್ತಾಪುರ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕಿ ರಜನಿ ಪಾಟೀಲ್, ಬಂಜಾರ ಮಹಿಳಾ ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಶಿವರಾಮ ಪವಾರ್ ಮಾತನಾಡಿದರು. ಸಮೂಹ ಸಂಪನ್ಮೂಲ ವ್ಯಕ್ತಿ ಸೂರ್ಯಕಾಂತ ದಿಗ್ಗಾಂವ್ ಪ್ರಾಸ್ತಾವಿಕ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯ ರುದ್ನೂರ ಕಾರ್ಯಕ್ರಮ ಉದ್ಘಾಟಿಸಿದರು. ಕಸಾಪ ವಾಡಿ ವಲಯ ಅಧ್ಯಕ್ಷ ಸಿದ್ದಯ್ಯ ಶಾಸ್ತಿçà ನಂದೂರಮಠ ಸರಸ್ವತಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಬಂಜಾರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸೋಮಸಿಂಗ್ ರಾಠೋಡ್, ದೈಹಿಕ ಶಿಕ್ಷಣಾಧಿಕಾರಿ ದೇವಿಂದ್ರರೆಡ್ಡಿ ದುಗನೂರ, ಪ್ರಮುಖರಾದ ಅಬ್ದುಲ್ ಸಲೀಂ ಪ್ಯಾರೆ, ಹುಸೇನ್ ಪಾಷಾ ಇನಾಮದಾರ, ರೇಣುಕಾ, ವಿಶ್ವನಾಥ ಪೋದ್ದಾರ, ಬಸವರಾಜ ಹೊಸಮನಿ, ಬುದ್ಧಪ್ರಿಯ ಕೋಮಟೆ, ಸಿಸ್ಟರ್ ಗ್ರೇಸಿ, ಮಲ್ಲಮ್ಮ ದೊರೆ, ಬಸವರಾಜ, ರೇಖಾ, ಸಿದ್ದು, ಅಮಿನುದ್ದಿನ್, ಗುಂಡಪ್ಪ ಭಂಕೂರ, ಸುರೇಶ ರಾಠೋಡ್, ಅಶ್ವಿನಿ, ಶಾಂತಾ, ಕಾಸಿಂಬಿ, ರಾಘವೇಂದ್ರ ಗುಡಾಳ, ಪ್ರಿಯಾಂಕಾ ಶಿಂಧೆ, ಶರಣಬಸಪ್ಪ, ಭಗವಾನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net