ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವನೆ ಬೆಳೆಸಿ

CTD DYATA
Published on

ಚಿತ್ತದುರ್ಗ: ಶಿಕ್ಷಕರು,ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವನೆ ಬೆಳೆಸುವುದು ಅಗತ್ಯವೆಂದು ಡಯಟ್ ಪ್ರಾಚಾರ‌್ಯ ಎಂ.ನಾಸಿರುದ್ದೀನ್ ಹೇಳಿದ ರು.ನಗರದ ಡಯಟ್‌ನಲ್ಲಿ ಡಿಎಸ್‌ಇಆರ್‌ಟಿಯಿಂದ ರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಯೋಜನೆಯಡಿ ಸರ್ಕಾರಿ ಪ್ರೌಢ ಶಾಲಾ ವಿದ್ಯಾ ರ್ಥಿಗಳಿಗೆ ಗುರುವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಪಾತ್ರಾಭಿಯ ಮತ್ತು ಜಾನಪದ ನೃತ್ಯ ಸ್ಪರ್ಧಾ ಕಾರ‌್ಯಕ್ರಮ ಉದ್ಘಾಟಿಸಿ ಮಾತನಾ ಡಿದ ಅವರು ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಖ್ಯ.
ವಿದ್ಯಾರ್ಥಿಗಳು ಆರೋಗ್ಯಕರ ಸ್ಪರ್ಧಾ ಭಾವನೆ ಬೆಳೆಸಿಕೊಳಬೇಕು.ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿ ಗಳಲ್ಲಿ ಆತ್ಮವಿಶ್ವಾಸ,ಕ್ರಿಯಾಶೀಲತೆ ಬೆಳೆಯುತ್ತದೆ ಎಂದರು. ಜಿಲ್ಲಾ ನೋಡಲ್ ಅಧಿಕಾರಿ ಎಸ್.ಬಸವರಾಜು ಮಾತನಾಡಿ,ಶಾಲೆಗಳಲ್ಲಿ ಶೈಕ್ಷಣಿಕ ಕಲಿಕೆಯೊಂದಿಗೆ ಸ್ಪರ್ಧಾ ಸಹಪಠ್ಯ ಚಟುವಟಿಕೆಗಳ ಮೂಲಕ ಜೀವನ ಕೌಶಲ ಬೆಳೆಸುವ ಸನ್ನಿವೇಶ ಕಲ್ಪಿಸಿ ಜನ ಸಂಖ್ಯೆ ಸುಸ್ಥಿರ ಅ ಭಿವೃದ್ಧಿ ನಡುವಿನ ಅಂತರ್ ಸಂಬಂಧದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಸಹಕಾರಿಯಾಗಿದೆ. ಸ್ಪರ್ಧೆಗಳು ಥೀಮ್ ಆಧಾರಿತ ವಾಗಿದ್ದು,ಶಾಲಾ ಹಂತ,ತಾಲೂಕು,ಜಿಲ್ಲಾ, ಪ್ರಾದೇಶಿಕ ಹಾಗೂ ರಾಷ್ಟ್ರ ಹಂತದಲ್ಲಿ ನಡೆಯಲಿದೆ.
ವಿದ್ಯಾರ್ಥಿಗಳಲ್ಲಿ ಮಾತುಗಾರಿಕೆ,ಅಭಿನಯ ಕೌಶಲ,ವರ್ತನೆಗಳು, ಜೀವನ ಕೌಶಲಗಳು, ಸಂವೇದನಾಶೀಲತೆ ಬೆಳೆಸಲು ಸ್ಪರ್ಧಾ ಕಾ ರ‌್ಯಕ್ರಮಗಳು ಸಹಕಾರಿಯಾಗಿವೆ ಎಂದರು. ಪಾತ್ರಾಭಿನಯ ಸ್ಪರ್ಧೆಯಲ್ಲಿ ಹೊಸದುರ್ಗ ಸ.ಪ.ಪೂ ಕಾಲೇಜು(ಪ್ರೌಢಶಾಲಾ ವಿಭಾಗ) (ಪ್ರ),ಹೊಳಲ್ಕೆರೆ-ಹಿರೆಎಮ್ಮಿಗನೂರು ಸರ್ಕಾರಿ ಪ್ರೌಢಶಾಲೆ (ದ್ವಿ),ಚಿತ್ರದುರ್ಗ-ಜಿ.ಆರ್.ಹಳ್ಳಿ ಸರ್ಕಾರಿ ಪ್ರೌಢಶಾಲೆ (ತೃ)ಸ್ಥಾನ ಪಡೆ ದಿವೆ.
ಜಾನಪದ ನೃತ್ಯ ಸ್ಪರ್ಧೆಯಲ್ಲಿ ಹೊಳಲ್ಕೆರೆ ತಾಲೂಕು ಎನ್‌ಜಿ ಹಳ್ಳಿ ಸರ್ಕಾರಿ ಪ್ರೌಢಶಾಲೆ (ಪ್ರ),ಚಳ್ಳಕೆರೆ-ತಿಮ್ಮಪ್ಪಯ್ಯನ ಹಳ್ಳಿ(ದ್ವಿ), ಹೊಸದುರ್ಗ-ತಂಡಗ ಸರ್ಕಾರಿ ಪ್ರೌಢಶಾಲೆ(ತೃ)ಸ್ಥಾನ ಪಡೆದಿದ್ದು,ಜಿಲ್ಲಾ ಹಂತದಲ್ಲಿ ಪ್ರಥಮ ಸ್ಥಾನ ಪಡೆದ ತಂಡಗಳು ರಾಜ್ಯಮಟ್ಟದಲ್ಲಿ ಭಾಗವಹಿಸಲು ಅವಕಾಶವಿದೆ ಎಂದು ತಿಳಿಸಿದರು.
ಉಪನ್ಯಾಸಕಿ ವಿ.ಕನಕಮ್ಮ,ತಾಂತ್ರಿಕ ಸಹಾಯಕ ಅವಿನಾಶ್,ಮುಖ್ಯಶಿಕ್ಷಕ ಸುರೇಂದ್ರ ನಾಯಕ್,ತೀರ್ಪುಗಾರರಾದ ಡಾ.ಚಾಂದ್‌ಸು ಲ್ತಾನ,ವೇಣುಗೋಪಾಲ್,ನಾಗರತ್ನ,ನಾಗವಲ್ಲಿಶಾಸ್ತ್ರಿ,ಸಿಂಧು,ಅಶ್ವಿನಿ ಚಂದ್ರಶೇಖರ್,ಶಿಕ್ಷಕರು ಮತ್ತು ವಿದ್ಯಾರ್ಥಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net