

ಹಗರಿಬೊಮ್ಮನಹಳ್ಳಿ: ಕಸಾಪ ದತ್ತಿ ಉಪನ್ಯಾಸದ ಮೂಲಕ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ಮೂಡಿಸುತ್ತಿರುವುದು ಉತ್ತಮ ಕಾರ್ಯಎಂದು ಅಕ್ಕಿ ಬಸಮ್ಮ ತೋಟಪ್ಪ ಸ್ಮಾರಕ ಪ.ಪೂ.ಕಾಲೇಜ್ ಆಡಳಿತ ಮಂಡಳಿ ಸದಸ್ಯ ಡಾ.ಜೆ.ಎಂ.ಮಹೇಶ್ವರಯ್ಯ ಹೇಳಿದರು.
ತಂಬ್ರಹಳ್ಳಿಯ ಕಿನ್ನಾಳ್ ಪೋರಮಾಂಬೆ ಗುರುಸಿದ್ದಪ್ಪ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದಿಂದ ಅಕ್ಕಿ ಬಸಣ್ಣಿ, ಗಂಗಾವತಿ ಪಂಪಾಪತೆಪ್ಪ ನರಸಮ್ಮ ಮತ್ತು ಡಿ.ಖಾಸಿಂಸಾಬ್ ಸಾಕುಮಾಬಿ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಬುಧವಾರ ಮಾತನಾಡಿದರು.
ಕಸಾಪ ತಾಲೂಕು ಅಧ್ಯಕ್ಷ ಗೂಳಪ್ಪ ಹುಲಿಮನಿ ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯದಲ್ಲಿ ಯಾವುದನ್ನು ಸ್ವೀಕರಿಸಬೇಕು, ಯಾವ ಅಂಶಗಳನ್ನು ಪಡೆದರೆ ವೈಯಕ್ತಿ ಮತ್ತು ಸಮಾಜಕ್ಕೆ ಒಳ್ಳೆಯದಾಗುತ್ತೆ ಎಂದು ಆಲೋಚಿಸುವ ಶಕ್ತಿ ಬೆಳೆಯಬೇಕು, ಕನ್ನಡಿಗರು ಕನ್ನಡದ ಕೈಂಕರ್ಯಕ್ಕೆ ತೊಡಗಬೇಕು ಎಂದು ಕರೆ ನೀಡಿದರು.
ದತ್ತಿ ದಾನಿಗಳ ಪರವಾಗಿ ಹಿರಿಯ ಸಾಹಿತಿ ಡಿ.ರಾಮನಮಲಿ, ಶಾಲೆಯ ಮುಖ್ಯಶಿಕ್ಷಕ ಕೆ.ವಿ.ಲೋಕೇಶ ಮಾತನಾಡಿದರು. ಶಿಕ್ಷಕ ಸಿ.ಶೇಖರ್ ನಾಯ್ಕ ಪವಾಡ ರಹಸ್ಯ ಬಯಲು ಮತ್ತು ವೈಜ್ಞಾನಿಕ ಚಿಂತನೆ ಕುರಿತು ಪ್ರಾತ್ಯಕ್ಷಿಕೆ ಮೂಲಕ ಉಪನ್ಯಾಸ ನೀಡಿದರು.
ತಂಬ್ರಹಳ್ಳಿ ಹೋಬಳಿ ಅಧ್ಯಕ್ಷ ಎಸ್.ವಿ.ಪಾಟಿಲ್, ಹಂಪಸಾಗರದ ಹೋಬಳಿ ಅಧ್ಯಕ್ಷ ಎಲ್.ಬಸವರಾಜಪ್ಪ, ಹಿರಿಯ ಸಾಹಿತಿಗಳಾದ ಮೇಟಿ ಕೊಟ್ರಪ್ಪ, ವಿ.ಬಿ.ಮಲ್ಲೇಶ್, ಗಣೇಶ ರಾವ್, ಕನ್ನಡಪರ ಸಂಘಟನೆಯ ಸಂಚಾಲಕ ಸಂಚಿ ಶಿವಕುಮಾರ್, ಪ್ರಾಂಶುಪಾಲ ಎಚ್.ಎಂ.ಬಸವರಾಜಯ್ಯ, ಶಾಲಾ ಆಡಳಿತ ಮಂಡಳಿ ಸದಸ್ಯ ಕೊಳ್ಳಿ ಶೇಷರೆಡ್ಡಿ, ಶಿಕ್ಷಕ ಗಂಗಾಧರ, ಪ್ರಮುಖರಾದ ಶ್ರೀನಿವಾಸ, ಸುಣಗಾರ ಪರಶುರಾಮ, ಲೈಬ್ರರಿ ಪಾಂಡುರಂಗಪ್ಪ, ಕೆ.ಮಂಜುನಾಥ ಇದ್ದರು.