ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಸ್ಕಾರ ಮೂಡಿಸಲಿರುವ ಎನ್‌ಎಸ್‌ಎಸ್

05NGD1
ನಂಜನಗೂಡು ತಾಲೂಕಿನ ಚಂದ್ರವಾಡಿ ಗ್ರಾಮದಲ್ಲಿ ಆಯೋಜಿಸಿದ್ದ ಜೆಎಸ್‌ಎಸ್ ಪಾಲಿಟೆಕ್ನಿಕ್‌ನ ಎನ್ನೆಸ್ಸೆಸ್ಸ್ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಎನ್.ವಿದ್ಯಾಶಂಕರ್, ಬಿ.ಎಸ್.ರಾಜಶೇಖರ್, ಡಿ.ಜಿ.ಸೋಮಶೇಖರಮೂರ್ತಿ ಇದ್ದರು.
Published on

ನಂಜನಗೂಡು: ಎನ್‌ಎಸ್‌ಎಸ್ ಶಿಬಿರಗಳಲ್ಲಿ ಭಾಗವಹಿಸುವುದರಿಂದ ಶಿಸ್ತು, ಸಂಸ್ಕಾರ, ಸಹಬಾಳ್ವೆ ಗುಣ ಬೆಳೆಸಯುತ್ತದೆ ಎಂದು ಜೆಎಸ್‌ಎಸ್ ಪಾಲಿಟೆಕ್ನಿಕ್ ಪ್ರಾಂಶುಪಾಲ ಎನ್.ವಿದ್ಯಾಶಂಕರ್ ಹೇಳಿದರು.

ಮೈಸೂರು ಹಾಗೂ ನಂಜನಗೂಡಿನಲ್ಲಿರುವ ಜೆಎಸ್‌ಎಸ್ ಪಾಲಿಟೆಕ್ನಿಕ್ ಕಾಲೇಜು ವತಿಯಿಂದ ತಾಲೂಕಿನ ಚಂದ್ರವಾಡಿ ಗ್ರಾಮದಲ್ಲಿ ಆಯೋಜಿಸಿದ್ದ ಎನ್‌ಎಸ್‌ಎಸ್ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಮಕ್ಕಳಲ್ಲಿ ಶಿಕ್ಷಣದ ಜತೆಗೆ ಸಂಸ್ಕಾರವಿದ್ದರೆ ಮಾತ್ರ ಬದುಕಿನಲ್ಲಿ ಸನ್ಮಾರ್ಗದಲ್ಲಿ ಸಾಗಲು ಸಾಧ್ಯ. ಈ ದಿಸೆಯಲ್ಲಿ ಸಹಬಾಳ್ವೆಯ ಮಹತ್ವವನ್ನು ಅರಿಯುವುದು ಮುಖ್ಯ ಎಂದು ಹೇಳಿದರು.

ಶಿಬಿರವನ್ನು ಯಶಸ್ವಿಗೊಳಿಸಲು ಸಹಕರಿಸಿದ ಶಿಬಿರಾಧಿಕಾರಿಗಳನ್ನು ಗೌರವಿಸಲಾಯಿತು. ಇದೇ ಸಂದರ್ಭ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಮೈಸೂರು ಜೆಎಸ್‌ಎಸ್ ಪಾಲಿಟೆಕ್ನಿಕ್ ಪ್ರಾಂಶುಪಾಲ ಬಿ.ಎಸ್.ರಾಜಶೇಖರ್, ಅನುರಾಗ ಸೇವಾ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಡಿ.ಜಿ.ಸೋಮಶೇಖರಮೂರ್ತಿ, ಎನ್‌ಎಸ್‌ಎಸ್ ರಾಜ್ಯ ಸಲಹಾ ಸಮಿತಿ ಸದಸ್ಯ ಚನ್ನಮಲ್ಲಿಕಾರ್ಜುನಸ್ವಾಮಿ, ಶಿಬಿರಾಧಿಕಾರಿಗಳಾದ ಕೆ.ಪಿ.ಮಹದೇವಸ್ವಾಮಿ, ಕೆ.ಬಿ.ಚಂದ್ರಶೇಖರಮೂರ್ತಿ, ಎಚ್.ಪಿ.ರಾಜೇಶ್, ಯೋಗೇಶ್ವರಿ, ಎಸ್.ಶ್ರುತಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net