

ಹೊಳೆನರಸೀಪುರ: ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ ಬೆಳೆಸಬೇಕು. ಆಗ ಮೂಢನಂಬಿಕೆಯಿಂದ ದೂರ ಉಳಿಯುತ್ತಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ ನುಡಿದರು.
ಸರ್ಕಾರಿ ಪ್ರೌಢ ಶಾಲೆ ಕೆ ಹೆಚ್ ಬಿ ಕಾಲೋನಿಯಲ್ಲಿ ಏರ್ಪಡಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನ್ನಾಡುತ್ತಾ ವಿಜ್ಞಾನ ಸತ್ಯವನ್ನು ಮಾತ್ರ ತಿಳಿಸುತ್ತದೆ. ವಿಜ್ಞಾನದ ಅಭಿವೃದ್ಧಿ ದೇಶದ ಬೆಳವಣಿಗೆಗೆ ನಾಂದಿ ಹಾಡುತ್ತದೆ. ವಿದ್ಯಾರ್ಥಿಯು ತನ್ನ ಕಲಿಕಾ ಸಂದರ್ಭದಲ್ಲಿಯೇ ಸಂಶೋಧನಾ ಮನೋಭಾವನೆ ಬೆಳೆಸಿಕೊಳ್ಳಬೇಕು. ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳುವುದರಿಂದ ಜ್ಞಾನಾರ್ಜನೆ ಬೆಳೆಯುತ್ತದೆ. ಜ್ಞಾನಿಗಳು ವಿಶ್ವದ ಅಸ್ತಿ ಎಂದರು.
ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದ ವೇಣುಗೋಪಾಲ್ ಮಾತನ್ನಾಡುತ್ತಾ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಸರ್ ಸಿ ವಿ ರಾಮನ್ ರವರ ಜ್ಞಾಪಕಾರ್ಥಕವಾಗಿ ಆಚರಿಸುತ್ತಾರೆ. ಸಿ ವಿ ರಾಮನ್ ರವರು ರಾಮನ್ ಪರಿಣಾಮವನ್ನು ವಿಶ್ವಕ್ಕೆ ಪರಿಚಯಿಸಿ ಎಷ್ಯಾ ಖಂಡದಲ್ಲಿಯೇ ಭಾರತಕ್ಕೆ ಮೊಟ್ಟ ಮೊದಲು ನೊಬೆಲ್ ಪಾರಿತೋಷಕ ಪಡೆದ ಪ್ರಥಮ ವಿಜ್ಞಾನಿ ಎಂದರು.
ಸೋಮೇಶ್ ಆರಾಧ್ಯ ಪವಾಡ ರಹಸ್ಯ ಬಯಲು ಕಾರ್ಯಕ್ರಮ ನೆರವೇರಿಸಿಕೊಟ್ಟರು.ಈ ಕಾರ್ಯಕ್ರಮ ನೆರೆದಿದ್ದವರನ್ನು ನಿಬ್ಬೆರಗಾಗುವಂತೆ ಮಾಡಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷೆ ವೀಣಾ ವಹಿಸಿದ್ದರು.
ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪಟ್ಟಣದ ಶಾಲೆಗಳಾದ ಸ್ವರ್ಣ ಪ್ರೌಢ ಶಾಲೆ, ಗ್ರೀನ್ ವುಡ್ ಪ್ರೌಢ ಶಾಲೆ, ಚೇತನ ಪ್ರೌಢ ಶಾಲೆ, ಸರ್ಕಾರಿ ಪ್ರೌಢ ಶಾಲೆ ಪಾರ್ಕ್ ಪಕ್ಕ, ಜಯಪ್ರಕಾಶ್ ಪ್ರೌಢ ಶಾಲೆ, ಸರ್ಕಾರಿ ಬಾಲಕರ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಸವಿತಾ, ಎಸ್ ಡಿ ಎಂ ಸಿ ಸದಸ್ಯ ಶೇಖರ್, ಸರ್ಕಾರಿ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಜವರೇಗೌಡ, ಕಾರ್ಯದರ್ಶಿ ವೀರಭದ್ರ, ಉಪಾಧ್ಯಕ್ಷ ಕಾಂತರಾಜು, ಬಿ ಆರ್ ಪಿ ವಿಶ್ವನಾಥ್, ಸಿ ಆರ್ ಪಿ ಕೃಷ್ಣ ಮೂರ್ತಿ, ಬಾ ನಂ ಲೋಕೇಶ್, ಶಶಿಕುಮಾರ್, ವಿಷ್ಣುಕುಮಾರ್, ಲೋಹಿತ್ ಕುಮಾರ್, ರಮ್ಯಾ, ಪ್ರಶಾಂತಿನಿ, ಲಕ್ಷ್ಮಿ ಇನ್ನಿತರರು ಉಪಸ್ಥಿತರಿದ್ದರು.