

ಮೈಸೂರು: ವಿದ್ಯಾರ್ಥಿಗಳಲ್ಲಿ ಮೂಲ ವಿಜ್ಞಾನ ಕುರಿತು ಆಸಕ್ತಿ ಮೂಡಿಸಬೇಕು ಎಂದು ಪದ್ಮಶ್ರೀ ಪುರಸ್ಕೃತ ವಿಜ್ಞಾನಿ ಪ್ರೊ.ಸುಬ್ಬಣ್ಣ ಅಯ್ಯಪ್ಪನ್ ಹೇಳಿದರು.
ಲಕ್ಷ್ಮೀಪುರಂನಲ್ಲಿರುವ ಗೋಪಾಲ ಸ್ವಾಮಿ ಶಿಶುವಿಹಾರ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಏರ್ಪಡಿಸಿದ್ದ ‘ಬೆರಗು-2024’ ರಾಜ್ಯ ಮಟ್ಟದ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮೂಲ ವಿಜ್ಞಾನ ಕಲಿಕೆ ಕಡಿಮೆಯಾಗುತ್ತಿದೆ. ಇದು ವಿಜ್ಞಾನ ಕ್ಷೇತ್ರ ಬೆಳವಣಿಗೆ ಕುಂಠಿತವಾಗಲಿದೆ. ಆದ್ದರಿಂದ ಮೂಲ ವಿಜ್ಞಾನ ಕಲಿಕೆಗೆ ವಿದ್ಯಾರ್ಥಿಗಳನ್ನು ಉತ್ತೇಜಿಸಬೇಕು ಎಂದರು.
ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕು. ಇದು ಪ್ರಜ್ಞಾವಂತ ಸಮಾಜ ಸೃಷ್ಟಿಗೆ ನೆರವಾಗಲಿದೆ. ಚಿಂತನೆ, ವಿಚಾರ ವಿಮರ್ಶೆಯಿಂದ ಕ್ರಿಯಾಶೀಲತೆ ಬೆಳೆಯುತ್ತದೆ.
ಇದರಿಂದ ಜ್ಞಾನವು ಕೌಶಲವಾಗಿ ಬದಲಾಗಲಿದೆ ಎಂದರು.
ವಿಜ್ಞಾನ ಹಾಗೂ ಗಣಿತ ವಿಷಯ ಕಠಿಣ ಎಂಬ ಭಾವ ಅನೇಕ ಮಕ್ಕಳಲ್ಲಿ ಇದೆ. ಇದನ್ನು ಹೋಗಲಾಡಿಸಲು ವಿಜ್ಞಾನ ಮೇಳ ಸಹಕಾರಿಯಾಗಲಿದೆ. ಜತೆಗೆ, ಮಕ್ಕಳಲ್ಲಿ ವೈಜ್ಞಾನಿಕ ಆಸಕ್ತಿ ಸಹ ವೃದ್ಧಿಯಾಗಲಿದೆ ಎಂದರು.
ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಅಕ್ಷರಾಭ್ಯಾಸ ಇದ್ದರೆ ಸಾಲದು. ಜ್ಞಾನದ ಅವಶ್ಯಕತೆ. ಪ್ರಾಥಮಿಕ ಹಾಗೂ ಪ್ರೌಢಶಾಲೆ ಹಂತದಲ್ಲೇ ಮಕ್ಕಳಿಗೆ ವಿಜ್ಞಾನ ಶಿಕ್ಷಣದ ಬಗ್ಗೆ ಅಭಿರುಚಿ ಬೆಳೆಸಬೇಕು ಎಂದರು.
ವಿಶ್ರಾಂತ ಕುಲಪತಿ ಪ್ರೊ. ಜಿ.ಹೇಮಂತ ಕುವಾರ್ ಉದ್ಘಾಟಿಸಿ ವಾತನಾಡಿ, ಮಕ್ಕಳು ವೈಜ್ಞಾನಿಕ ಮನೋಭಾವವನ್ನು ಬಿತ್ತಬೇಕು ಎಂದರು.
ದಶಕಗಳ ಹಿಂದೆ ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಕುರಿತು ಆಸಕ್ತಿ ಮೂಡಿಸುವ ಕೆಲಸ ವಾಡಿದ್ದರಿಂದ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಂು ಸಾಧನೆ ವಾಡಲು ಸಾಧ್ಯವಾಯಿತು. ಹಾಗೆಯೇ ಈಗ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವ ಮೂಲಕ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆಗಳು ಪ್ರೇರಣೆಯಾಗಬೇಕಿದೆ ಎಂದರು
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಟಿ.ಜವರೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ರಾಜು, ಗೋಪಾಲ ಸ್ವಾಮಿ ಶಿಶುವಿಹಾರ ಶಿಕ್ಷಣ ಸಂಸ್ಥೆ ಮುಖ್ಯೋಪಾಧ್ಯಾಯ ರಾಮ ಪ್ರಸಾದ್ ಸೇರಿದಂತೆ ಇತರರಿದ್ದರು. ಮಕ್ಕಳು ತಯಾರಿಸಿದ 30 ವಿಜ್ಞಾನ ವಸ್ತು ವಾದರಿಗಳನ್ನು ಪ್ರದರ್ಶಿಸಲಾಯಿತು.