ವಿದ್ಯಾರ್ಥಿಗಳ ಸಾಧನೆಗೆ ಸೂರ್ತಿ ತುಂಬಲಿ

27MKH1
Published on

ಎಂ.ಕೆ.ಹುಬ್ಬಳ್ಳಿ: ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಪಾಲಕರು ಮತ್ತು ಶಿಕ್ಷಕರು ಪ್ರೋತ್ಸಾಹಿಸಿ ಸಾಧನೆಗೆ ಸೂರ್ತಿ ತುಂಬಬೇಕು ಎಂದು ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ ಹೇಳಿದರು.

ಪಟ್ಟಣದ ಅಲ್ ಅಮೀನ್ ಉರ್ದು ಪ್ರೌಢಶಾಲೆಯಲ್ಲಿ ಈಚೆಗೆ ಆಯೋಜಿಸಿದ್ದ ೨೦೨೪-೨೦೨೫ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದಲ್ಲಿ ಜಾತಿಭೇದ ನಡೆಯಬಾರದು. ನಾವೆಲ್ಲರೂ ಭಾರತಾಂಬೆಯ ಮಕ್ಕಳೆಂಬ ಭಾವನೆ ಇಟ್ಟುಕೊಳ್ಳಬೇಕು ಎಂದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಪ್ರಕಾಶ ಕೊಡ್ಲಿ, ಉಪಾಧ್ಯಕ್ಷ ಮಂಜುನಾಥ ಕಡಕೋಳ, ಮುಖ್ಯಾಧಿಕಾರಿ ರವಿಶಂಕರ ಮಾಸ್ತಿಹೊಳಿಮಠ, ಸದಸ್ಯರಾದ ಸುಬಾನಿ ಅಗಸಿಬಾಗಿಲ, ಸಮೀರ್ ಪಟೇಲ್, ಪರವಿನಬಾನು ನಬುವಾಲೆ, ಮಲ್ಲಪ್ಪ ನಾಗನೂರ, ಪತ್ರಕರ್ತ ಮೆಹಬೂಬ್ ಮಕಾನದಾರ್, ಮುಗುಟಸಾಬ್ ಪಟೇಲ್, ಮಹಮ್ಮದ್ ಯೂಸೂಬ್ ಖಾಜಿ, ಮಂಜೂರ ಮಕಾನದಾರ, ಜಾವೀದ್ ಜಮಾದಾರ, ಶಕೀಲ್ ಮುಜಾವರ, ಇರ್ಫಾನ್ ಗುಲ್ಬರ್ಗ, ಶಾಲೆ ಮುಖ್ಯಶಿಕ್ಷಕ ಎಸ್.ಎಂ.ಪಟೇಲ್, ಶಿಕ್ಷಕ ಎಸ್.ಎಂ.ಮಾಮೂಲದಾರ, ಎಸ್.ಎಂ. ಮುಜಾವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net