

ಚಿತ್ರದುರ್ಗ: ಪಠ್ಯಕಲಿಕೆಯೊಂದಿಗೆ ಮಕ್ಕಳ ಸರ್ವತೋಮುಖ ಬೆಳವಣಿಗೆ ಕ್ರೀಡೆ ಸಹಕಾರಿ ಎಂದು ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ಹೇಳಿದ ರು. ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಿಂದ ನಗರದ ವೀರ ವನಿತೆ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ವಾರ್ಷಿಕ ಕ್ರೀಡಾ ಕೂಟದಲ್ಲಿ ಮಾತನಾಡಿ, ಕ್ರೀಡೆ ಮಾನಸಿಕ ಹಾಗೂ ದೈಹಿಕ ಸದೃಢತೆಯನ್ನು ಹೆಚ್ಚಿಸುತ್ತದೆ. ಆಟೋಟಗಳು ದೈನಂದಿನ ದಿನಚರಿಗಳಲ್ಲಿ ಒಂದಾಗ ಬೇಕು. ಮೊಬೈಲ್ ಬಳಕೆ ಕುರಿತಂತೆ ಮಕ್ಕಳ ಮೇಲೆ ನಿಗಾ ವಹಿಸಬೇಕೆಂದು ಪಾಲಕರಿಗೆ ಸಲಹೆ ನೀಡಿದರು.
ಡಿಡಿಪಿಐ ಎಂ.ಆರ್.ಮಂಜುನಾಥ್ ಮಾತನಾಡಿ, ಈ ಶಾಲೆಯಿಂದ ರಾಜ್ಯ,ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಗೌರವಿಸುತ್ತಿರು ವುದು ಉತ್ತಮ ಕಾರ‌್ಯವಾಗಿದೆ ಎಂದರು.
ಸನ್ಮಾನ ಸ್ವೀಕರಿಸಿದ ಸಾಹಸಿ ಜ್ಯೋತಿರಾಜ್ ಮಾತನಾಡಿ,ಪರ್ವತಾರೋಹಣ ವಿಭಾಗದ ಒಲಂಪಿಕ್ಸ್‌ನಲ್ಲಿ ಪದಕ ತರುವುದು ನನ್ನ ಮ ಹಾದಾಸೆಯಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಬಿ.ವಿಜಯ್‌ಕುಮಾರ್ ಮಾತನಾಡಿದರು.ರಾಜ್ಯ,ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ 9 ವಿದ್ಯಾರ್ಥಿಗಳನ್ನು ಸನ್ಮಾ ನಿಸಲಾಯಿತು. ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕರಾದ ಎಸ್.ಎಂ ಪೃಥ್ವೀಶ,ಪಿ.ಸಿ.ಸುನಿತಾ,ಎನ್.ಎಸ್.ಸ್ನೇಹಾ, ಮುಖ್ಯಶಿಕ್ಷಕ ಎನ್.ಜಿ.ತಿಪ್ಪೇಸ್ವಾಮಿ, ಪಿ.ಬಸವರಾಜಯ್ಯ,ಉಪಪ್ರಾಚಾರ‌್ಯ ಬಿ.ಅವಿನಾಶ್ ಮತ್ತಿತರರು ಇದ್ದರು. ಅಫ್ರೀನ್‌ಸಬಾ ಸ್ವಾಗತಿಸಿ, ಖಾನ್‌ಖಾದರ್ ವಂದಿಸಿದರು.