ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಸ್ತು ಬಹಳ ಮುಖ್ಯ; ವಿದುಷಿ ಬಾನು ಚಿದಾನಂದ

13_HSN_02
Published on

ಹಾಸನ: ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಸ್ತು ಬಹಳ ಮುಖ್ಯ. ಸಮಯದ ಸದುಪಯೋಗ ಪಡಿಸಿಕೊಳ್ಳುವುದರ ಜತೆಗೆ ಪ್ರಗತಿ ಸಾಧಿಸುವತ್ತ ನಮ್ಮ ಗಮನವಿರಬೇಕು. ಹಾಗೆಯೇ ಕನ್ನಡ ಭಾಷೆಗೂ ಹೆಚ್ಚು ಮಹತ್ವ ನೀಡಬೇಕು ಎಂದು ಭರತನಾಟ್ಯ ಕಲಾವಿದೆ, ವಿದುಷಿ ಬಾನು ಚಿದಾನಂದ ಕಿವಿ ಮಾತು ಹೇಳಿದರು.

ವಿದ್ಯಾನಗರದ ಕ್ರೈಸ್ಟ್ ಶಾಲೆಯಲ್ಲಿ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸಂಘದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆ, ಸಂಗೀತ, ಸಾಹಿತ್ಯ ಮುಂತಾದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮಕ್ಕಳಿಗೆ ಉತ್ತೇಜನಕಾರಿ ಮಾತುಗಳನ್ನಾಡಿದರು.

ಈ ಸಂದರ್ಭದಲ್ಲಿ ಮಕ್ಕಳ ಮಂತ್ರಿಮಂಡಲದ ಸಭೆಯಲ್ಲಿ ಆಯ್ಕೆಯಾದ ಮಂತ್ರಿ ಮಂಡಲದ ಸದಸ್ಯರಿಗೆ ಪ್ರಾಂಶುಪಾಲರಾದ ರೆವೆರೆಂಡ್ ಫಾದರ್ ಅನುಮೋನ್ ಜೋಸೆಫ್ ಪ್ರತಿಜ್ಞಾ ವಿಧಿ ಬೋಧಿಸಿ ಅವರನ್ನು ಅಭಿನಂದಿಸಿದರು. ನಂತರ ಅವರ ಕರ್ತವ್ಯಗಳೇನು ಎಂಬುದನ್ನು ತಿಳಿಸಿಕೊಟ್ಟರು. ಒಂದರಿಂದ ಹತ್ತನೇ ತರಗತಿಯ ಶಾಲಾ ತಂಡದ ನೇತೃತ್ವದ ರೂವಾರಿಗಳಾಗಿ ಸಿ.ಲೇಖನ್ ಹಾಗೂ ಸೌಮ್ಯಾ ಮಹೇಶ್ ಆಯ್ಕೆಯಾದರು. ಉಪವಿಭಾಗದಲ್ಲಿ ವಿಶ್ವಾಸ್ ಶೆಟ್ಟಿ ಹಾಗೂ ಅನನ್ಯಾ ದೀಕ್ಷಿತ್, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸಂಘದ ಮುಂದಾಳತ್ವದಲ್ಲಿ ರೆಹಾಬ್ ಹಸನೈನ್ , ಸಾನಿಧ್ಯ ಜೈನ್, ಉಪವಿಭಾಗದಲ್ಲಿ ಅನುರಾಗ್ ಅದಿತಿ, ಕ್ರೀಡಾ ವಿಭಾಗದಲ್ಲಿ ಜಿಷ್ಣು ಹಾಗೂ ನೇಸರ, ಉಪವಿಭಾಗದಲ್ಲಿ ಸಿ. ಕುಂದನ್ ಹಾಗೂ ಪೂರ್ಣಿಕಾ ಆಯ್ಕೆಯಾದರು. ನಂತರ ಮಕ್ಕಳು ಮನೋರಂಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಕರ್ಷಕ ನೃತ್ಯ ಪ್ರದರ್ಶನ ನೀಡಿದರು.

ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ರೆವೆರೆಂಡ್ ಫಾದರ್ ರಿಜೋ ಥಾಮಸ್ ಹಾಗೂ ಉನ್ನತ ಅಧಿಕಾರಿ ರೆವೆರೆಂಡ್ ಫಾದರ್ ಅಲೆಕ್ಸ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net