

ಚಿಕ್ಕಮಗಳೂರು: ವಿದ್ಯಾರ್ಥಿಗಳನ್ನು ಭವ್ಯ ಭಾರತದ ಸತ್ಪçಜೆಗಳಾಗಿ ರೂಪಿಸಿ ಸಮಾಜದ ಒಂದು ಹಂತಕ್ಕೆ ಕೊಂಡೊಯ್ಯುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಸಾಹಿತಿ ಬಿ.ತಿಪ್ಪೇರುದ್ರಪ್ಪ ತಿಳಿಸಿದರು.
ಕಡೂರು ತಾಲೂಕಿನ ಎಸ್.ಕೋಡಿಹಳ್ಳಿಯ ಚಂದ್ರಪ್ಪ ಅವರು ಜ್ಯೂನಿಯರ್ ಕಾಲೇಜು ಉಪನ್ಯಾಸಕ ವೃತ್ತಿಯಿಂದ ನಿವೃತ್ತರಾದ ಹಿನ್ನೆಲೆಯೆಲ್ಲಿ ಸ್ನೇಹಿತರು ಅವರ ಮನೆಗೆ ಭೇಟಿ ನೀಡಿ ಗೌರವಿಸಿದ ವೇಳೆ ಮಾತನಾಡಿದ ಅವರು, ಸಾವಿರಾರು ಮಕ್ಕಳನ್ನು ತಮ್ಮ ಅನುಭವ, ಆದ್ಯತೆ, ವಿಷಯಾಧಾರಿತ, ಬೋಧನೆ ನೀಡಿ, ತಿದ್ದಿ, ಶೈಕ್ಷಣಿಕ ಹಾಗೂ ಶೈಕ್ಷಣಿಕೇತರವಾಗಿ ಸಂಸ್ಕಾರ ತುಂಬುವ ಜೊತೆಗೆ ಪರಿಸರದ ಕಾಳಜಿ, ಶಿಸ್ತು, ಸಂಯಮ ಮೂಡಿಸುವುದು ಶಿಕ್ಷಕರ ಮತ್ತು ಉಪನ್ಯಾಸಕರ ಮೂಲಧ್ಯೇಯವಾಗಬೇಕು ಎಂದರು.
ಇತ್ತೀಚೆಗೆ ಸರ್ಕಾರಿ ಶಾಲಾ-ಕಾಲೇಜುಗಲ್ಲಿ ಮಕ್ಕಳ ದಾಖಲಾತಿ ಕ್ಷೀಣಿಸುತ್ತಿದೆ. ಇದಕ್ಕೆ ಮೂಲ ಕಾರಣ ಪಾಲಕರ ಆಂಗ್ಲಭಾಷೆಯ ವ್ಯಾಮೋಹವಾಗಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಗಣನೀಯವಾಗಿ ದಾಖಲಾತಿ ಕಡಿಮೆಯಾಗುವುದರ ಮೂಲಕ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಿ ಶಾಲೆಗಳನ್ನು ಉಳಿಸಬೇಕಿದೆ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪತ್ರಕರ್ತ ರಮೇಶ್ ನಾರಿನಿಂಗಜ್ಜಿ, ಶಿಕ್ಷಕರಾದ ಶಿವಮೂರ್ತಿ, ಗಂಗಾಧರಪ್ಪ ಇದ್ದರು.