ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಉಪನ್ಯಾಸಕರು ಸೃಜನಶೀಲರಾಗಬೇಕು

Lecturers should be creative for the future of students
ಸಿಂದಗಿಯ ಆರ್.ಡಿ. ಪಾಟೀಲ ಕಾಲೇಜಿನಲ್ಲಿ ಹಮ್ಮಿಕೊಂಡ ಅರ್ಥಶಾಸ, ವ್ಯವಹಾರ ಅಧ್ಯಯನ ಹಾಗೂ ಲೆಕ್ಕಶಾಸ ವಿಷಯಗಳ ಕುರಿತು ಒಂದು ದಿನದ ಕಾರ್ಯಾಗಾರಕ್ಕೆ ಪದವಿಪೂರ್ವ ಇಲಾಖೆಯ ಉಪನಿರ್ದೇಶಕ ಡಾ. ಸಿ.ಕೆ. ಹೊಸಮನಿ ಚಾಲನೆ ನೀಡಿದರು. ಪ್ರಾಚಾರ್ಯರಾದ ಕೆ.ಎ. ಉಪ್ಪಾರ, ಸಿ.ಎಸ್.ಹಿರೇಮಠ, ವಿಮಲಕಾಂತ ಪಾಟೀಲ ಮತ್ತಿತರರಿದ್ದರು.
Published on

ಸಿಂದಗಿ: ವಿದ್ಯಾರ್ಥಿಗಳಿಗೆ ಉಪನ್ಯಾಸಕರು ಪಠ್ಯದ ಜತೆಗೆ ಪಠ್ಯೇತರಕ್ಕೂ ಉತ್ತೇಜನ ನೀಡುವಲ್ಲಿ ಸೃಜನಶೀಲತೆ ರೂಢಿಸಿಕೊಳ್ಳಬೇಕು ಎಂದು ಪದವಿ ಪೂರ್ವ ಇಲಾಖೆಯ ಉಪನಿರ್ದೇಶಕ ಡಾ. ಸಿ.ಕೆ. ಹೊಸಮನಿ ಸಲಹೆ ನೀಡಿದರು.

ನಗರದ ಶ್ರೀಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಆರ್.ಡಿ. ಪಾಟೀಲ ಕಲಾ, ವಾಣಿಜ್ಯ, ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಶಾಲಾ ಶಿಕ್ಷಣ ಇಲಾಖೆ(ಪದವಿಪೂರ್ವ) ಹಾಗೂ ಆರ್.ಡಿ. ಪಾಟೀಲ ಕಾಲೇಜು ಸಹಯೋಗದಲ್ಲಿ ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ ಹಾಗೂ ಲೆಕ್ಕಶಾಸ್ತ್ರ ವಿಷಯಗಳ ಕುರಿತ ಒಂದು ದಿನದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ಉಪನ್ಯಾಸಕರು ಸದಾ ವಿದ್ಯಾರ್ಥಿಗಳ ಶೈಕ್ಷಣಿಕ ಶ್ರೇಯೋಭಿವೃದ್ಧಿಗೆ ಅಧ್ಯಯನಶೀಲರಾಗಬೇಕು. ವಿದ್ಯಾರ್ಥಿಗಳ ಪ್ರತಿಭೆ ಗುರುತಿಸುವುದರೊಂದಿಗೆ ಅವರಲ್ಲಿನ ವಿಷಯಾಸಕ್ತಿ ಗುರುತಿಸಿ ಪೂರಕವಾಗಿ ವರ್ತಿಸಿ ಗರಿಷ್ಠ ಅಂಕಗಳನ್ನು ಪಡೆಯುವಲ್ಲಿ, ಜಿಲ್ಲೆಗೆ ಉತ್ತಮ ಫಲಿತಾಂಶ ದೊರಕಿಸುವಲ್ಲಿ ಕಾರ್ಯೋನ್ಮುಖರಾಗಬೇಕು ಎಂದರು.

ಸರ್ಕಾರಿ ಪಪೂ ಕಾಲೇಜಿನ ಪ್ರಾಚಾರ್ಯ ಕೆ.ಎ. ಉಪ್ಪಾರ, ಕಲಕೇರಿ ಬಸವೇಶ್ವರ ಪಪೂ ಕಾಲೇಜಿನ ಪ್ರಾಚಾರ್ಯ ಸಿ.ಎಸ್.ಹಿರೇಮಠ, ಹಿರಿಯ ಉಪನ್ಯಾಸಕ ಎಲ್.ಜಿ. ಕುಂಬಾರ, ಬಿ.ಎಸ್. ಅಂದೇವಾಡಿ ಮಾತನಾಡಿದರು. ಪ್ರಾಚಾರ್ಯ ವಿಮಲಕಾಂತ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

ಬಿ.ಎಂ. ಸಿಂಗನಳ್ಳಿ, ಪಿ.ವಿ. ಮಹಲಿನಮಠ, ಡಾ. ಶರಣು ಜೋಗೂರ, ಎಸ್.ಎಚ್. ಜಾಧವ, ಬಿ.ಬಿ. ಜಮಾದಾರ, ಎಸ್.ಆರ್. ಬೂದಿಹಾಳ, ಎಸ್.ಎಸ್. ತಾಳಿಕೋಟೆ, ಸುಭಾಸ ಹೊಸಮನಿ, ಶಿವರಾಜ ಕುಂದಗೋಳ, ಸುನೀಲ ಪಾಟೀಲ, ಜಟ್ಟಿಂಗರಾಯ ಗಾಣಗೇರ, ಎಸ್.ಜಿ. ಮಾರ್ಸನಳ್ಳಿ, ಗವಿಸಿದ್ದಪ್ಪ ಆನೆಗುಂದಿ ಸೇರಿದಂತೆ ಜಿಲ್ಲೆಯ ಅರ್ಥಶಾಸ, ವ್ಯವಹಾರ ಅಧ್ಯಯನ ಹಾಗೂ ಲೆಕ್ಕಶಾಸ ವಿಷಯಗಳ ಉಪನ್ಯಾಸಕರುಗಳಿದ್ದರು.

ಉಪನ್ಯಾಸಕ ಪ್ರಸನ್ನ ಜೋಗೂರ ಸ್ವಾಗತಿಸಿ, ಪರಿಚಯಿಸಿದರು. ರಶ್ಮಿ ಕುಲಕರ್ಣಿ, ಭಾಗ್ಯ ಶರಾಬಿ, ಪ್ರತಿಭಾ ಬಿರಾದಾರ ಪ್ರಾರ್ಥಿಸಿದರು. ಉಪನ್ಯಾಸಕ ರಾಹುಲ ನಾರಾಯಣಕರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net