ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಹೊಣೆ ಬೋಧಕರ ಮೇಲಿದೆ

CTD 12 WROK SHOP (1)--04
Published on


ಚಿತ್ರದುರ್ಗ: ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣವಾಗುವುದು ತರಗತಿಗಳಲ್ಲಿ,ಹಾಗಾಗಿ ಜಾಗೃತಿಯಿಂದ ಕಾರ‌್ಯನಿರ್ವಹಿಸುವಂತೆ ಶಿವಮೊಗ್ಗ ಕುವೆಂಪು ವಿವಿ ವಿ ಶ್ರಾಂತ ಪ್ರಾಧ್ಯಾಪಕ ಡಾ.ಎ.ರಾಮೇಗೌಡ ಪ್ರಾಧ್ಯಾಪಕರಿಗೆ ಸಲಹೆ ನೀಡಿದರು.
ದಾವಣಗೆರೆ ವಿವಿ ಸಮಾಜಶಾಸ್ತ್ರ ವಿಭಾಗ ಮತ್ತು ದಾವಣಗೆರೆ ವಿವಿ ಸಮಾಜಶಾಸ್ತ್ರ ಅಧ್ಯಾಪಕರ ಸಂಘದ ಸಂಯುಕ್ತಾಶ್ರಯಲ್ಲಿ ಮಂಗಳವಾರ ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಏರ್ಪಡಿಸಿದ್ದ ವಿವಿ 5 ಮತ್ತು 6ನೇ ಸೆಮಿಸ್ಟರ್ ಪದವಿ ಮಟ್ಟದ ಸಮಾಜಶಾಸ್ತ್ರ ಪಠ್ಯಕ್ರಮ ಕಾರ‌್ಯಾಗಾರ ಉ ದ್ಘಾಟಿಸಿ ಮಾತನಾಡಿದ ಅವರು,ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಹೊಣೆ ಶಿಕ್ಷಕರ ಮೇಲಿರುತ್ತದೆ. ಮಕ್ಕಳ ಉತ್ತಮ ಭವಿಷ್ಯಕ್ಕೆ ಅವರ ಪಾಲ ಕರೊಂದಿಗೆ ಬೋಧಕರ ಪಾತ್ರವೂ ಮಹತ್ವದ್ದರಾಗಿರುತ್ತದೆ.
ಎನ್‌ಸಿಇಆರ್‌ಟಿ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ತಂದಿದ್ದು,ಪದವಿಯಲ್ಲಿ ಕಲಿಯುವುದನ್ನು ಪದವಿ ಪೂರ್ವದಲ್ಲೇ ವಿದ್ಯಾರ್ಥಿಗಳು
ಕಲಿಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಧ್ಯಾಪಕರು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳ ಬೇಕಿದೆ ಎಂದರು. ಕಾರ‌್ಯಾಗಾರ ಸಂಚಾಲಕ ಡಾ. ಎಸ್.ಆರ್.ಲೇಪಾಕ್ಷ ಮಾತನಾಡಿ,ವಿದ್ಯಾರ್ಥಿ ಹಾಗೂ ಅಧ್ಯಾಪಕರ ಅನುಕೂಲಕ್ಕಾಗಿ ಈ ಕಾರ‌್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದರು.
ಪ್ರಾಚಾರ‌್ಯ ಪ್ರೊ.ಬಿ.ಟಿ. ತಿಪ್ಪೇರುದ್ರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
ಡಾ.ಎಸ್.ಆರ್.ಪ್ರಕಾಶ್,ಡಾ.ಹುಚ್ಚೇಗೌಡ,ಡಾ.ಕೆ.ಜ್ಯೋತಿ,ಮಾರ್ಟಿನ್‌ಸಾಮ್ಯುಯೆಲ್,ಡಾ.ಟಿ.ಶ್ಯಾಮರಾಜ್,ಡಾ.ಕೆ.ಸಿ.ಶರಣಪ್ಪ,ಡಾ.ಸಿದ್ದಪ್ಪ ಡಾ.ತಿಪ್ಪೇಸ್ವಾಮಿ,ಡಾ.ಟಿ.ಮಂಜುಳಾ,ಡಾ.ಸಿ.ಸುರೇಶ್,ಪ್ರೊ.ಟಿ.ನಾಗರಾಜ್,ಪ್ರೊ.ಎಸ್.ಆನಂದ,ಡಾ.ಡಿ.ಧರಣೇಂದ್ರಯ್ಯ,ಪ್ರೊ.ಸಿ.ವೈ.ಯಶೋಧ,ಪ್ರೊ.ನಯಾಜ್‌ಅಹಮದ್,ಪ್ರೊ.ಸುರೇಶ್,ಎಲ್.ನಾಗರಾಜಪ್ಪ ಮತ್ತಿತರರು ಇದ್ದರು.
(ಸಿಟಿಡಿ 12 ವರ್ಕ್‌ಶಾಪ್)
ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಸಮಾಜ ಶಾಸ್ತ್ರ ಪಠ್ಯಕ್ರಮ ಕುರಿತ ಕಾರ‌್ಯಾಗಾರದಲ್ಲಿ ಶಿವಮೊಗ್ಗ ಕುವೆಂಪು ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ಎ.ರಾಮೇಗೌಡ,ಪ್ರೊ.ಬಿ.ಟಿ. ತಿಪ್ಪೇರುದ್ರಸ್ವಾಮಿ,ಡಾ.ಎಸ್.ಆರ್.ಲೇಪಾಕ್ಷ, ಡಾ.ಎಸ್.ಆರ್.ಪ್ರಕಾಶ್,ಡಾ.ಹುಚ್ಚೇಗೌಡ,ಡಾ.ಕೆ.ಜ್ಯೋತಿ,ಮಾರ್ಟಿನ್‌ಸಾಮ್ಯುಯೆಲ್ ಡಾ.ಟಿ.ಮಂಜುಳಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net