

ಕಲಬುರಗಿ: ಮಕ್ಕಳ ಜೀವನದ ಗುರಿಯನ್ನು ಸಾಧಿಸುವ ಮಾರ್ಗ ತೋರಿಸಿ, ವಿದ್ಯಾರ್ಥಿಗಳಲ್ಲಿ ಪ್ರೇರಣೆ ತುಂಬುವವರೇ ಗುರು. ದಾರಿತಪ್ಪುವ ವಿದ್ಯಾರ್ಥಿಗಳ ನಡೆ ನುಡಿಗಳನ್ನು ಸರಿ ಮಾಡಿ, ಸನ್ಮಾರ್ಗ ತೋರುವವರೇ ಗುರು ಎಂದು ರಾಷ್ಟ್ರೋತ್ಥಾನ ಶಾಲೆ ಪ್ರಧಾನಾಚಾರ್ಯ ಗಿರೀಶ ಜೋಶಿ ಹೇಳಿದರು.
ನಗರದ ಹೊರವಲಯದ ಶರಣಸಿರಸಗಿ ಬಳಿಯ ರಾಷ್ಟೊçÃತ್ಥಾನ ವಿದ್ಯಾಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ಗುರುಪೂರ್ಣಿಮೆಯಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿ, ಜನ್ಮತಃ ಏನನ್ನೂ ಅರಿಯದ ಮಗು, ಕಾಲಕ್ರಮೇಣ ಸುತ್ತಲಿನ ಭಾಷೆ ಗಮನಿಸುತ್ತ, ಕೆಲ ಶಬ್ಧಗಳನ್ನು ಕಲಿಯುತ್ತದೆ. ಮನೆ ಸುತ್ತಲಿನ ಪರಿಸರ, ಜನರು, ವಸ್ತು, ವಿಷಯ ಅರಿಯುತ್ತದೆ. ಮಗುವಿನ ಕಲಿಕೆ, ವೇಗ ಬದಲಾಗುತ್ತದೆ. ಈ ವೇಳೆ ಗುರುವಿನ ಉತ್ತಮ ಮಾರ್ಗದರ್ಶನ ಅಗತ್ಯ ಎಂದರು.
ಶಾಲೆಗಳಲ್ಲಿ ಅಕ್ಷರ ಹೇಳಿಕೊಡುವವರು ಮಾತ್ರ ಗುರುವಲ್ಲ. ಮನೆಯಲ್ಲಿ ತಾಯಿ, ತಂದೆ, ಅಜ್ಜ, ಅಜ್ಜಿ, ಬಂಧು, ಬಳಗ, ಸ್ನೇಹಿತರು, ಸಮಾಜದ ಎಲ್ಲ ಸ್ಥರದ ಜನರು, ಗಣ್ಯರನ್ನೂ ಗುರುಗಳಾಗಿ ಭಾವಿಸಿದರೆ ಮನುಷ್ಯ ಎತ್ತರಕ್ಕೆ ಏರಬಹುದು ಎಂದರು.
ಶಿಕ್ಷಕಿ ಜಯಶ್ರೀ ಮಾತನಾಡಿ, ಮಹಾಭಾರತ ಬರೆದಂತಹ ವ್ಯಾಸ ಮುನಿಗಳ ಬಗ್ಗೆ ಹಾಗೂ ಗುರುವಿನ ಮಹತ್ವ ಕುರಿತು ಮಾತನಾಡಿದರು. ಶ್ರದ್ಧಾ ಸ್ವಾಗತಿಸಿದರು. ಕುಶಾಲ್ ನಿರೂಪಣೆ ಮಾಡಿದರು. ಸಾನ್ವಿಕ ವಂದಿಸಿದರು. ಶಾಲೆಯ ಶಿP್ಷÀಕ ವೃಂದದವರು, ಆಡಳಿತಾಧಿಕಾರಿ ಶ್ರೀಕಾಂತ ಪಾಟೀಲ್, ಶೈಕ್ಷಣಿಕ ಸಂಯೋಜಕ ರವಿಕುಮಾರ ಇತರರಿದ್ದರು.