ವಿದ್ಯಾರ್ಥಿಗಳ ಪ್ರತಿಭೆ ಗುರುತಿಸುವ ಗುರು

5BK4
Published on

ಬಸವಕಲ್ಯಾಣ: ಶಿಕ್ಷಕ ಸಮಾಜದ ಓರೆ ಕೋರೆ ತಿದ್ದುವ ಜತೆಗೆ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಹೊರತೆಗೆಯುವ ಕೆಲಸ ಮಾಡಬೇಕು ಎಂದು ಕಲಬುರಗಿಯ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ವೆಂಕಣ್ಣ ಡೊಣ್ಣೆಗೌಡರ ಹೇಳಿದರು. ನಗರದ ಎಸ್.ಎಸ್.ಕೆ.ಬಸವೇಶ್ವರ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿ, ಶಿಸ್ತು, ಶ್ರದ್ಧೆ ಹಾಗೂ ಪರೋಪಕಾರ ಶಿಕ್ಷಕರು ಮೈಗೂಡಿಸಿಕೊಳ್ಳಬೇಕು ಎಂದರು. ಪ್ರಾಚಾರ್ಯ ಡಾ.ಬಸವರಾಜ ಎವಲೆ ಮಾತನಾಡಿ, ವಿದ್ಯಾರ್ಥಿಗಳು ಜ್ಞಾನದ ಜತೆಗೆ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು. ನಿವೃತ್ತ ಪ್ರಾಧ್ಯಾಪಕ ಡಾ, ನಿಂಗಣ್ಣ ಹೂಗಾರ, ಐಕ್ಯೂಎಸಿ ಸಂಯೋಜಕ ಡಾ.ಶಿವಕುಮಾರ ಪಾಟೀಲ್, ಆರ್.ಡಿ.ಬಾಲಿಕಿಲೆ, ಡಾ.ಎಂ.ಜಿ. ಪಾಟೀಲ್, ಎಸ್.ಎಸ್.ಬಾಬನಗೊಳ ಇತರರಿದ್ದರು. ರೇಣುಕಾ ಸ್ವಾಗತಿಸಿದರು. ಬಸವ ಜ್ಯೋತಿ ಅತಿಥಿ ಪರಿಚಯ ಮಾಡಿದರು. ಅನುರಾಧ ವಂದಿಸಿದರು. ಸರಸ್ವತಿ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net