

ಶ್ರೀರಂಗಪಟ್ಟಣ: ವಿದ್ಯಾರ್ಥಿಗಳಲ್ಲಿರುವ ಬಹುಮುಖ ಪ್ರತಿಭೆ ಗುರುತಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಪ್ರತಿಭಾ ಕಾರಂಜಿಯ ಮೂಲ ಉದ್ದೇಶ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅನಂತರಾಜು ಹೇಳಿದರು.
ಪಟ್ಟಣದಲ್ಲಿ ಸೋಮವಾರ ಕಸಬಾ ಹೋಬಳಿ ಪ್ರೌಢಶಾಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ವೈವಿಧ್ಯಮಯ ಕಲೆ ಮತ್ತು ಕೌಶಲ್ಯಗಳನ್ನು ಶಿಕ್ಷಕರು ಗುರುತಿಸಿದರೆ ಪಾಲಕರು ಇದಕ್ಕೆ ಸಹಕರಿಸಬೇಕು. ಎಂದು ಸಲಹೆ ನೀಡಿದರು.
ಓಂ ಶ್ರೀನಿಕೇತನ ಟ್ರಸ್ಟ್ ವಿದ್ಯಾ ಸಂಸ್ಥೆ ಸಂಸ್ಥಾಪಕಿ ಆಶಾಲತಾ ಪುಟ್ಟೇಗೌಡ ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಜಾನಪದ ಗೀತೆ, ಭಾವಗೀತೆ, ಸಂಸ್ಕೃತ ಪಠಣ, ಹಿಂದಿ ಭಾಷಣ ಸ್ಪರ್ಧೆ, ಛದ್ಮವೇಷ, ರಸಪ್ರಶ್ನೆ, ಪೂಜಾ ಕುಣಿತ ಮತ್ತು ಮಿಮಿಕ್ರಿ ಗಮನ ಸೆಳೆದವು.
ಮುಖ್ಯ ಶಿಕ್ಷಕರಾದ ಶಿವಕುಮಾರ್, ಲಕ್ಷ್ಮೀ, ಶಿಕ್ಷಕಿಯರಾದ ಸುಮಾ, ಪುಷ್ಪಲತಾ, ರಘು, , ಕುಮಾರಸ್ವಾಮಿ ಭಾಗವಹಿಸಿದ್ದರು.