ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ

24blh1 krce news
ಬೈಲಹೊಂಗಲ ಕೆ.ಆರ್.ಸಿ.ಈ.ಎಸ್ ಶಿಕ್ಷಣ ಸಂಸ್ಥೆಯಲ್ಲಿ ವಿವಿಧ ಸ್ಪರ್ಧೆಗಳ ಉದ್ಘಾಟನೆ ಕಾರ್ಯಕ್ರಮ ಜರುಗಿತು. ಡಾ.ಸಂಗಮನಾಥ ಲೋಕಾಪುರ, ಪ್ರೊ. ಸದಾಶಿವ ಪೊಟೆ, ಪ್ರೊ. ಸಂತೋಷ ನೀಲಣ್ಣನವರ ಇತರರಿದ್ದರು.
Published on

ಬೈಲಹೊಂಗಲ: ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ಶಿಕ್ಷಕರು, ಪಾಲಕರು ಮಾಡಬೇಕು ಎಂದು ಡಾ.ಸಂಗಮನಾಥ ಲೋಕಾಪುರ ಹೇಳಿದರು. ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ಶಿಕ್ಷಣ ಸಂಸ್ಥೆಯ ಜಿಜಿಡಿ ಕಲಾ, ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ 75ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಪ್ರಬಂಧ, ಚರ್ಚಾ, ದೇಶಭಕ್ತಿ ಗೀತೆ ಹಾಗೂ ವಿವಿಧ ಸ್ಪರ್ಧೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು. ಪ್ರತಿಯೊಬ್ಬರಲ್ಲಿ ರಾಷ್ಟ್ರಾಭಿಮಾನ ನೆಲೆಯೂರಬೇಕು. ದೇಶ, ನಾಡು-ನುಡಿಗೆ ಅತ್ಯ ಅಮೂಲ್ಯ ಕೊಡುಗೆ ನೀಡಬೇಕು ಎಂದರು. ಪ್ರಾಚಾರ್ಯ ಬಿ.ಬಿ.ಬೂದಿಹಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಸದಾಶಿವ ಪೊಟೆ, ಪ್ರೊ. ಸಂತೋಷ ನೀಲಣ್ಣನವರ, ಅಕ್ಷತಾ ಪಟ್ಟಣಶೆಟ್ಟಿ, ಎಂ.ಜಿ.ನಾಗನೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net