ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ

CTD 6 SRS--03
Published on

ಚಿತ್ರದುರ್ಗ: ನಗರದ ಎಸ್‌ಆರ್‌ಎಸ್ ಹೆರಿಟೇಜ್ ಶಾಲೆಯಲ್ಲಿ ಬುಧವಾರ ಶಾಲಾ ಮಟ್ಟದ 4ನೇ ಸಹಪಠ್ಯೇತರ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾ ಗಿತ್ತು. 1ರಿಂದ 10ನೇ ತರಗತಿ ವಿದ್ಯಾರ್ಥಿಗಳು ವಿವಿಧ ರೀತಿಯ ಚಟುವಟಿಕೆಗಳ ಮೂಲಕ ತಮ್ಮ ಪ್ರತಿಭೆ ಅನಾವರಣ ಗೊಳಿಸಿದರು. ಸೊ ಲೋಡ್ಯಾನ್ಸ್,ಲೀಫ್‌ಆರ್ಟ್, ವೇಜಿಟೆಬಲ್‌ಕಾರ್ವಿಂಗ್,ಮೊನೋಆರ್ಟ್, ರಂಗೋಲಿವಿಥ್‌ಗ್ರೈನ್ ಮೊದಲಾದ ಸ್ಪರ್ಧಾತ್ಮಕ ಚಟುವಟಿಕೆ ಗಳಲ್ಲಿ ಭಾಗವಹಿಸಿದ್ದ ಮಕ್ಕಳು ತೀರ್ಪುಗಾರರ ಮೆಚ್ಚುಗೆ ಗಳಿಸಿದರು.
ಈ ವೇಳೆ ಮಾತನಾಡಿದ ಪ್ರಾಂಶುಪಾಲ ಎಂ.ಎಸ್.ಪ್ರಭಾಕರ್, ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ, ಈ ಕಾರ‌್ಯಕ್ರಮ ವೇದಿ ಕೆಯಾಗಿದೆ ಎಂದರು. ಸಹಪಠ್ಯೇತರ ಚಟುವಟಿಕೆಗಳ ಕೋ-ಆರ್ಡಿನೇಟರ್‌ಗಳಾದ ಸುನೀಲ್‌ಭಟ್, ಲುಬ್ನಾಕೌಸರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net