ವಿದ್ಯಾರ್ಥಿ ಸಂಘ ಉದ್ಘಾಟನೆ

ನಾಪೋಕ್ಲುವಿನ ಬೇತು ಗ್ರಾಮದ ಎಕ್ಸೆಲ್ ಸ್ಕೂಲ್ ಆಫ್ ಎಜುಕೇಶನ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಕುಟ್ಟಂಚೆಟ್ಟೀರ ಮಾದಪ್ಪ, ವಿದ್ಯಾ ಸುರೇಶ್, ಚೋಕಿರ ರತೀಶ್ ತಮ್ಮಯ್ಯ, ಬಿದ್ದಾಟಂಡ ರಹನಾ ಸಂಪತ್, ವಿದ್ಯಾರ್ಥಿ ನಾಯಕರು ಇದ್ದರು.
21.npk-2
Published on

ನಾಪೋಕ್ಲು: ಸಮೀಪದ ಬೇತು ಗ್ರಾಮದ ಎಕ್ಸೆಲ್ ಸ್ಕೂಲ್ ಆಫ್ ಎಜುಕೇಶನ್ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ಸಂಸ್ಥೆಯ ಸಭಾಂಗಣದಲ್ಲಿ ಗುರುವಾರ ನಡೆಯಿತು.


ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಕುಟ್ಟಂಚೆಟ್ಟೀರ ಮಾದಪ್ಪ ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ವಿದ್ಯಾ ಸಮಸ್ಥೆಯ ಪ್ರಾಂಶುಪಾಲ ಚೋಕಿರ ರತೀಶ್ ತಮ್ಮಯ್ಯ ಅವರು ನೂತನವಾಗಿ ಆಯ್ಕೆಯಾಗಿರುವ ವಿದ್ಯಾರ್ಥಿ ನಾಯಕರಿಗೆ ಪ್ರಮಾಣ ವಚನ ಬೋಧಿಸಿದರು.


ವಿದ್ಯಾ ಸಂಸ್ಥೆಯಲ್ಲಿ 10 ವರ್ಷ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಬಿದ್ದಾಟಂಡ ರಹನಾ ಸಂಪತ್ ಅವರನ್ನು ಶಾಲಾ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.


ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳು: ವಿದ್ಯಾರ್ಥಿ ನಾಯಕಿನಾಗಿ ಕೆ.ಎಚ್. ಆಫಿಯಾ, ಉಪನಾಯಕನಾಗಿ ಬಿಶನ್ ಬಿದ್ದಪ್ಪ, ಕ್ರೀಡಾ ಸಚಿವನಾಗಿ ಪಿ.ಆರ್.ಅಸ್ಲಾಂ, ಉಪ ಕ್ರೀಡಾ ಮಂತ್ರಿಯಾಗಿ ಕೈಲಾಶ್, ಸಾಂಸ್ಕೃತಿಕ ಮಂತ್ರಿಯಾಗಿ ದರ್ಷ ದೇಚಮ್ಮ, ಸಾಂಸ್ಕೃತಿಕ ಉಪ ಮಂತ್ರಿಯಾಗಿ ದುಂದುಭಿ, ಸ್ವಚ್ಛತಾ ಮಂತ್ರಿಯಾಗಿ ಶರಣ್ಯಾ, ಸ್ವಚ್ಛತಾ ಉಪ ಮಂತ್ರಿಯಾಗಿ ಅಶ್ರೀಫಾ ಆಯ್ಕೆಯಾದರು.


ಕಾರ್ಯಕ್ರಮದಲ್ಲಿ ವಿದ್ಯಾ ಸಂಸ್ಥೆಯ ನಿರ್ದೇಶಕಿ ವಿದ್ಯಾ ಸುರೇಶ್, ಶಾಲಾ ಬೋಧಕ ವೃಂದ ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು. ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಮನರಂಜನಾ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net