ವಿದ್ಯಾರ್ಥಿ ವೇತನಕ್ಕೆ ಒತ್ತಾಯಿಸಿ ಎಬಿವಿಪಿ ಪ್ರತಿಭಟನೆ

CTD 22 ABVP--0000
Published on

ಚಿತ್ರದುರ್ಗ: ಕಾರ್ಮಿಕರ ಕಲ್ಯಾಣ ನಿಧಿ ಯೋಜನೆಯಡಿ ವಿದ್ಯಾರ್ಥಿ ವೇತನ ವೇತನ ಜಮಾ ಮಾಡದ ರಾಜ್ಯಸರ್ಕಾರದ ನಡೆ ವಿರೋಧಿಸಿ ಅಖಿಲ ಭಾರತೀಯ ವಿದ್ಯಾರ್ಥಿಪರಿಷತ್ ಕಾರ‌್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟಿಸಿದರು.
ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಅಸುರಕ್ಷಿತ ಹಾಗೂ ಅಸಂಘಟಿತ ವಲಯ ಕಾರ್ಮಿಕರ ಮತ್ತು ಅವರ ಕು ಟುಂಬದ ರಕ್ಷಣೆಗಾಗಿ ಸರಕಾರಗಳು ಬದ್ಧವಾಗಿರಬೇಕು, ಆದರೆ ರಾಜ್ಯಸರಕಾರ 2022-23ನೇ ಸಾಲಿನ ವಿದ್ಯಾರ್ಥಿವೇತನಕ್ಕೆ ಅನುದಾನ ಮಂಜೂರು ಮಾಡಿದ್ದರೂ ಈವರೆಗೆ ವಿದ್ಯಾರ್ಥಿಗಳಿಗೆ ಜಮಾ ಮಾಡದೆ ವಿದ್ಯಾರ್ಥಿಗಳ ಜೀವನದ ಜತೆ ಚೆಲ್ಲಾಟ ಆಡುತ್ತಿದೆ ಎಂದು ಆ ಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳಿಗೆ ತಕ್ಷಣ ವಿದ್ಯಾರ್ಥಿವೇತನ ಜಮಾ ಮಾಡುವುದು ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾಧಿ ಕಾರಿ ಕಚೇರಿ ತಹಸೀಲ್ದಾರ್ ಸಂತೋಷ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಪರಿಷತ್ ರಾಜ್ಯಕಾರ್ಯಕರಣಿ ಸದಸ್ಯ ಸುದರ್ಶನ್ ನಾಯ್ಕ, ಕನಕರಾಜ್‌ಕೋಡಿಹಳ್ಳಿ, ಜಿಲ್ಲಾ ಸಂಚಾಲಕ ಸಿದ್ದೇಶ್,ನಗರ ಕಾರ್ಯದ ರ್ಶಿ ಗೋಪಿ, ಚಿತ್ರಸ್ವಾಮಿ, ಚೈತ್ರಾ, ದರ್ಶನ್, ಸುದೀ ಪ್, ಮಧು, ಅಜಯ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net