ವಿದ್ಯಾರ್ಥಿ ವೇತನ ಇಳಿಕೆಗೆ ಖಂಡನೆ

Aidso
Published on

ಚಿತ್ರದುರ್ಗ: ರಾಜ್ಯ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ನೋಂದಾಯಿತ ಕಟ್ಟಡ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ವಾರ್ಷಿಕ 5ಸಾವಿರ ರೂ.ನಿಂದ 60ಸಾವಿರ ರೂ.ವರೆಗೆ ವಿತರಿಸುತ್ತ್ತಿದ್ದ ವಿದ್ಯಾರ್ಥಿ ವೇತನವನ್ನು 1,100 ರೂ.ನಿಂದ 11ಸಾವಿರ ರೂ.ಗೆ ಇಳಿಸಿರುವ ಕ್ರಮವನ್ನು ಎಐಡಿಎಸ್‌ಒ ಖಂಡಿಸಿದೆ.

ವಿದ್ಯಾರ್ಥಿ ವೇತನ ಭಾರೀ ಪ್ರಮಾಣದಲ್ಲಿ ಇಳಿಸಿರುವ ನಿರ್ಧಾರ ಹಿಂಪಡೆಯಬೇಕು. ಕಳೆದ ಒಂದೆರಡು ವರ್ಷದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಸಿಕ್ಕಿಲ್ಲ. ಕೂಡಲೇ ಜಮಾ ಮಾಡಲು ಕ್ರಮವಹಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿ ಜಿಲ್ಲಾಡಳಿತಕ್ಕೆ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಎಐಡಿಎಸ್‌ಒ ಸದಸ್ಯರಾದ ಎಚ್.ಹರಿಪ್ರಸಾದ್, ಎಚ್.ಎಂ.ನಾಗರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net