ವಿದ್ಯಾರ್ಥಿ ಮೇಲೆ ಶಿಕ್ಷಕನಿಂದ ಹಲ್ಲೆ

Published on

ಕೊಳ್ಳೇಗಾಲ: ಮೂರನೇ ತರಗತಿ ವಿದ್ಯಾರ್ಥಿಯ ಕೆನ್ನೆಗೆ ಥಳಿಸಿರುವ ಖಾಸಗಿ ಶಾಲೆ ಶಿಕ್ಷಕನ ಮೇಲೆ ತನಿಖೆ ನಡೆಸುವಂತೆ ಮಗುವಿನ ತಂದೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಿದ್ದಾರೆ.

ಖಾಸಗಿ ಶಾಲೆಯಲ್ಲಿ 3ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ಗುರುವಾರ ಎಂದಿನಂತೆ ಶಾಲೆಗೆ ಹೋಗಿ ಮನೆಗೆ ವಾಪಸ್ ಅಳುತ್ತಾ ಬರುತ್ತಿದ್ದ. ಪಾಲಕರು ಪರಿಶೀಲಿಸಿದಾಗ ಮಗುವಿನ ಎಡ ಭಾಗದ ಕೆನ್ನೆ ಊದಿ ಕೊಂಡಿರುವುದನ್ನು ಗಮನಿಸಿದ್ದಾರೆ. ನಂತರ ಮಗುವನ್ನು ವಿಚಾರಿಸಿದಾಗ ಶಿಕ್ಷಕ ಕೈಯಲ್ಲಿ ಕಪಾಲಕ್ಕೆ ಹೊಡೆದಿರುವುದಾಗಿ ಮಗು ಮಾಹಿತಿ ನೀಡಿದೆ. ಇದರಿಂದ ಬೇಸರಗೊಂಡ ಮಗುವಿನ ತಂದೆ ಮಧುಚಂದ್ರ ಶಾಲೆಗೆ ತೆರಳಿ ಶಿಕ್ಷಕನನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ತೆರಳಿ ಮಗುವಿಗೆ ಚಿಕಿತ್ಸೆ ಕೊಡಿಸಿದ್ದಾರೆ.

ಬಿಇಒಗೆ ದೂರು: ನನ್ನ ಮಗನ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿರುವ ಶಿಕ್ಷಕನ ಮೇಲೆ ತನಿಕೆ ನಡೆಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಅವರಿಗೆ ಲಿಖಿತ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net