ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಹೊಸ ಕಥೆಗಾರರನ್ನು ವಿದ್ಯಾರ್ಥಿ ಹಂತದಲ್ಲಿ ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಹುಬ್ಬಳ್ಳಿಯ ಅಕ್ಷರ ಸಾಹಿತ್ಯ ವೇದಿಕೆಯು ಕನ್ನಡದ ಖ್ಯಾತ ಕಥೆಗಾರ ಡಾ. ಪ್ರಹ್ಲಾದ ಅಗಸನಕಟ್ಟೆಯವರ ಸ್ಮರಣಾರ್ಥವಾಗಿ ಪ್ರಹ್ಲಾದ ಅಗಸನಕಟ್ಟೆ ವಿದ್ಯಾರ್ಥಿ ಕಥಾ ಸ್ಪರ್ಧೆ ಏರ್ಪಡಿಸಿದೆ.
ರಾಜ್ಯದ ಎಲ್ಲ ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಪುರಸ್ಕಾರ ಪಡೆಯುವ ಕಥೆಗೆ 5000 ರೂ. ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕ ನೀಡಲಾಗುವುದು. ಜೂನ್ ತಿಂಗಳಲ್ಲಿ ಕಾರ್ಯಕ್ರಮ ನಡೆಸಿ ಬಹುಮಾನ ವಿತರಿಸಲಾಗುವುದು ಎಂದು ವೇದಿಕೆ ತಿಳಿಸಿದೆ.
ಉದಯೋನ್ಮುಖ ಕತೆಗಾರರು ಕಾಲೇಜಿನ ಮುಖ್ಯಸ್ಥರಿಂದ ಪಡೆದ ’ನಮ್ಮ ಕಾಲೇಜಿನ ವಿದ್ಯಾರ್ಥಿ/ನಿ’ ಎಂಬ ದೃಢೀಕೃತ ಪ್ರಮಾಣ ಪತ್ರದೊಂದಿಗೆ ತಮ್ಮ ಅಪ್ರಕಟಿತ ಸ್ವರಚಿತ ಕಥೆಯನ್ನು ‘ಅಕ್ಷರ ಸಾಹಿತ್ಯ ವೇದಿಕೆ, ಕೇರಾಫ್ ಸುನಂದಾ ಪ್ರಕಾಶ ಕಡಮೆ, ನಂ. 90, ನಾಗಸುಧೆ, 6ಬಿ ಕ್ರಾಸ್, ಕಾಳಿದಾಸನಗರ, ವಿದ್ಯಾನಗರ ವಿಸ್ತೀರ್ಣ, ಹುಬ್ಬಳ್ಳಿ-580031’ ಈ ವಿಳಾಸಕ್ಕೆ ಏ. 30 ರೊಳಗೆ ಕಳುಹಿಸಬೇಕು.