ವಿದ್ಯಾರಣ್ಯಪುರಂನಲ್ಲಿ ಶಾಸಕ ಶ್ರೀವತ್ಸ ಪಾದಯಾತ್ರೆ

mysore
Published on

ಮೈಸೂರು: ಪಾಲಿಕೆಯ ಸಂಖ್ಯೆ 61ರ ವ್ಯಾಪ್ತಿಯ ವಿದ್ಯಾರಣ್ಯಪುರಂನ ಭಾಗಗಳಲ್ಲಿ ಸೋಮವಾರ ಬೆಳಗ್ಗೆ ಶಾಸಕ ಟಿ.ಎಸ್.ಶ್ರೀವತ್ಸ ಅವರು ಅಧಿಕಾರಿಗಳೊಂದಿಗೆ ಪಾದಯಾತ್ರೆ ನಡೆಸಿ ಜನರ ಸ್ಥಳೀಯ ಸಮಸ್ಯೆಗಳನ್ನು ಆಲಿಸಿದರು.

ಸ್ಥಳೀಯ ಸಮಸ್ಯೆಗಳಾದ ಉದ್ಯಾನದ ಸುತ್ತ ಗಿಡಗಳನ್ನು ಹಾಕಿಸಿಕೊಡುವುದು ಮತ್ತು ಬೆಳಗಿನ ಸಮಯದಲ್ಲಿ ಮಕ್ಕಳು ಕ್ರಿಕೆಟ್ ಆಡುವ ಮೂಲಕ ಅಕ್ಕಪಕ್ಕದ ಮನೆಗಳಿಗೆ ತೊಂದರೆಯಾಗುತ್ತಿದೆ. ರಾತ್ರಿ ಸಮಯದಲ್ಲಿ ಪುಂಡ ಹುಡುಗರು ಮದ್ಯಪಾನ ಮಾಡುತ್ತಾರೆ ಎಂದು ಶಾಸಕರಿಗೆ ಸ್ಥಳೀಯ ನಿವಾಸಿಯೊಬ್ಬರು ದೂರಿದರು.

ಸ್ಥಳೀಯ ನಿವಾಸಿಯಾದ ಪದ್ಮಮ್ಮ ಅವರು ಪಾಲಿಕೆಯ ವ್ಯಾಪ್ತಿಯ ಮಳಿಗೆಗಳು ಶಿಥಿಲವಾಗಿವೆ. ಆ ಮಳಿಗೆಗಳು ಯಾವುದೇ ಪ್ರಯೋಜನಕ್ಕೆ ಬಾರದ ಸ್ಥಿತಿಯಲ್ಲಿ ಇವೆ. ಹೀಗಾಗಿ, ಈ ಜಾಗಗಳಲ್ಲಿ ಪುಂಡ ಯುವಕರು ಅಸಭ್ಯವಾಗಿ ವರ್ತಿಸುತ್ತಾರೆ. ಈ ಕೂಡಲೇ ಇದನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲಕರವಾಗುವ ನಿಟ್ಟಿನಲ್ಲಿ ಕಾರ್ಯರೂಪಕ್ಕೆ ತರಬೇಕು ಎಂದು ಕೋರಿದರು.

ಈ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು. ಅಭಿವೃದ್ಧಿ ಅಧಿಕಾರಿ ಮಂಜುನಾಥ್ ರೆಡ್ಡಿ, ಇಂಜಿನಿಯರ್ ಚೇತನ್, ಆರೋಗ್ಯಾಧಿಕಾರಿ ಶಿವಪ್ರಸಾದ್, ವಾರ್ಡ್ ಉಸ್ತುವಾರಿ ಜೋಗಿಮಂಜು, ಪಾಲಿಕೆ ಮಾಜಿ ಸದಸ್ಯ ಜಗದೀಶ್, ವಾರ್ಡ್ ಅಧ್ಯಕ್ಷ ಶಿವಪ್ರಸಾದ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net