ವಿದ್ಯಾಭ್ಯಾಸ-ಉದ್ಯೋಗದಲ್ಲಿ ಮೀಸಲು

1-SanduruP3
Published on

ಸಂಡೂರು: ವಿದ್ಯಾರ್ಥಿಗಳು ಶಿಸ್ತು, ಸಂಯಮ, ದೇಶಭಕ್ತಿ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ಬಳ್ಳಾರಿಯ ಎನ್‌ಸಿಸಿ ಆಡಳಿತಾಧಿಕಾರಿ ರಾಹುಲ್ ಸಿಂಗ್ ಹೇಳಿದರು.

ಕೃಷ್ಣಾನಗರ ಬಳಿಯ ಬಿಕೆಜಿ ಗ್ರೂಫ್ ಆಫ್ ಇನ್‌ಸ್ಟಿಟ್ಯೂಷನ್‌ನಲ್ಲಿ ಎನ್‌ಸಿಸಿ ಘಟಕ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು. ಎನ್‌ಸಿಸಿ ಸೇರುವ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮತ್ತು ಉದ್ಯೋಗದಲ್ಲಿ ಮೀಸಲಾತಿ ದೊರೆಯಲಿದೆ ಎಂದರು.

ಬಿಕೆಜಿ ಸಂಸ್ಥಾಪಕ ಟ್ರಸ್ಟಿ ಬಿ.ನಾಗನಗೌಡ ಮಾತನಾಡಿ, ಶಾಲಾ ದಿನಗಳು ಮತ್ತು ಎನ್‌ಸಿಸಿ ಶಿಬಿರದ ಅನುಭವಗಳನ್ನು ಹಂಚಿಕೊಂಡರು. ಎನ್‌ಸಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ವ್ಯಕ್ತಿತ್ವ ವಿಕಸನದಲ್ಲಿ ಮಹತ್ವಪೂರ್ಣ ಪಾತ್ರ ವಹಿಸುತ್ತದೆ ಎಂದರು.

ಎನ್‌ಸಿಸಿ ಯೂನಿಟ್ ಸೂಪರಿಂಟೆಂಡೆಂಟ್ ಹಸೀನಾಬಾನು, ಪ್ರಾಚಾರ್ಯ ಡಾ.ಕೆ.ವಿ.ಮೋಹನ್ ರಾವ್, ಉಪಪ್ರಾಚಾರ್ಯ ಸಂತೋಷ್ ಜಟ್ಟಿ, ನಿವೃತ್ತ ಸೇನಾ ಅಧಿಕಾರಿ ವಾಸಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net