ವಿದ್ಯಾ ಜ್ಯೋತಿ ಶಾಲೆ ಮಕ್ಕಳು ರಾಜ್ಯಮಟ್ಟಕ್ಕೆ ಆಯ್ಕೆ

28 hulsur 02
Published on

ಹುಲಸೂರು: ಪಟ್ಟಣದ ವಿದ್ಯಾ ಜ್ಯೋತಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಷಟಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬೀದರ್‌ನಲ್ಲಿ ಬುಧವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಾದ ಆಶಿಶ್, ಸಚಿನ್, ನಂದನ, ದಿನೇಶ ಉತ್ತಮ ಪ್ರದರ್ಶನ ತೋರಿ, ಗೆಲುವು ಸಾಧಿಸಿದರು.

ವಿದ್ಯಾರ್ಥಿಗಳ ಸಾಧನೆಗೆ ಶಾಲೆ ವ್ಯವಸ್ಥಾಪಕಿ ಗೀತಾ, ಮುಖ್ಯ ಗುರು ಸುನೀತಾ, ಜಿಪಂ ಮಾಜಿ ಸದಸ್ಯ ಸುದೀರ ಕಾಡಾದಿ, ದೈಹಿಕ ಶಿಕ್ಷಣ ಶಿಕ್ಷಕ ಅರವಿಂದ ಕುಂಬಾರ ಇತರರು ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net