ವಿದೇಶಿ ಪ್ರಯಾಣಿಕರ ಕಫದ ಮಾದರಿ ಸಂಗ್ರಹ

11-6hbd1
Published on

ಹುಮನಾಬಾದ್: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿದೇಶದಿಂದ ಬಂದಿರುವ ಪ್ರಯಾಣಿಕರ ಗಂಟಲು ದ್ರವ ಪರೀಕ್ಷಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಆಸ್ಪತ್ರೆಯ ಸಿಎಂಓ ಡಾ. ನಾಗನಾಥ ಹುಲಸೂರೆ ತಿಳಿಸಿದ್ದಾರೆ. ಪಟ್ಟಣ ಮತ್ತು ತಾಲೂಕಿನ ವಿವಿಧ ಗ್ರಾಮಗಳಿಗೆ ಕುವೈತ್ ಮತ್ತು ಇತರ ದೇಶಗಳಿಂದ ಬಂದ ಪ್ರಯಾಣಿಕರು ಈಗಾಗಲೆ ಕ್ವಾರಂಟೈನ್ ಅವಧಿ ಮುಗಿಸಿದ್ದು, ವರದಿ ನೆಗೆಟಿವ್ ಇದ್ದರೂ ಮಾರ್ಗಸೂಚಿಯಂತೆ ಪರೀಕ್ಷಿಸಲಾಗಿದೆ ಎಂದರು. ತಾಲೂಕು ಆರೋಗ್ಯ ಅಧಿಕಾರಿ ಡಾ. ಅಶೋಕ ಮೈಲಾರೆ, ಡಾ. ಚೈತ್ರಾನಂದ, ಅಜಯ್, ಮಹಾನಂದಾ, ತೌಸೀಫ್, ರುಬೇನ್, ಈಶ್ವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net