ವಿದೇಶದಿಂದ ಬರುವವರ ಮಾಹಿತಿ ನೀಡಿ

1703klb12
Published on

ಕಲಬುರಗಿ: ಕರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ವಿದೇಶದಿಂದ ಜಿಲ್ಲೆಗೆ ಬರುವವರು ಸ್ವಯಂ ಆಗಿ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಶರತ್ ಬಿ. ಕೋರಿದ್ದಾರೆ.
ಸಹಾಯಕ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಂಗಳವಾರ ಮುಸ್ಲಿಂ ಧಾರ್ಮಿಕ ಮುಖಂಡರು ಹಾಗೂ ನಾಯಕರ ಸಭೆ ನಡೆಸಿದ ಅವರು, ಯಾರಾದರೂ ನಿಮ್ಮ ನೆರೆ ಹೊರೆಯವರು ವಿದೇಶದಿಂದ ಬಂದಿದ್ದರೆ ಮಾಹಿತಿ ನೀಡಬೇಕು. ಇದರಿಂದ ಸುಲಭವಾಗಿ ಶಂಕಿತರನ್ನು ಗುರುತಿಸಬಹುದು. ಯಾರನ್ನು ಹೋಂ ಕ್ವಾರಂಟೈನ್ನಲ್ಲಿ ಇರಲು ಸೂಚಿಸಲಾಗಿದೆಯೋ ಅವರು ಮನೆಯಲ್ಲೇ ಇರಬೇಕು ಎಂದು ತಾಕೀತು ಮಾಡಿದರು.
ಸಾರ್ವಜನಿಕ ಸಭೆ-ಸಮಾರಂಭಗಳಲ್ಲಿ ಭಾಗವಹಿಸುವುದನ್ನು ಕಡಿಮೆ ಮಾಡಬೇಕು. ಯಾರಿಗೂ ಕೈಕುಲುಕಬಾರದು, ಕೈಯಿಂದ ಬಾಯಿ, ಕಣ್ಣು, ಮೂಗುಗಳನ್ನು ಮುಟ್ಟಬಾರದು. ಆಗಾಗ್ಗೆ ಕೈ ತೊಳೆಯುವ ಮೂಲಕ ಮುಂಜಾಗ್ರತೆ ವಹಿಸಬೇಕು. ಶ್ವಾಸಕೋಶದ ತೊಂದರೆ ಇರುವವರಿಗೆ ಹೆಚ್ಚು ಸಮಸ್ಯೆ ಆಗಲಿದ್ದು, ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.
ನಗರ ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ ಮಾತನಾಡಿ, ಜನರು ಓಡಾಡದೆ ಮನೆಯಲ್ಲೇ ಇದ್ದರೆ ಸೋಂಕು ತಡೆಗಟ್ಟುವಲ್ಲಿ ಯಶಸ್ವಿಯಾಗಬಹುದು. ಇಲ್ಲದಿದ್ದಲ್ಲಿ ರಾಜ್ಯ ಅಷ್ಟೇ ಅಲ್ಲ, ದೇಶವನ್ನೇ ಅಪಾಯಕ್ಕೆ ತಂದೊಡ್ಡಲಿದೆ ಎಂದು ಎಚ್ಚರಿಸಿದರು.
ಕರೊನಾ ಭೀತಿಯಿಂದ ಸೌದಿ ಅರೇಬಿಯಾದ ಮುಸ್ಲಿಮರ ಪವಿತ್ರ ಕ್ಷೇತ್ರ ಮೆಕ್ಕಾದ ಐತಿಹಾಸಿಕ ಮಸೀದಿಯನ್ನೇ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಹೀಗಾಗಿ ಮಸೀದಿ, ದೇವಸ್ಥಾನದಂಥ ಸ್ಥಳಗಳಲ್ಲಿ ಹೆಚ್ಚು ಜನ ಸೇರಬಾರದು. ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಮುಂದಿನ ಒಂದು ತಿಂಗಳ ಕಾಲ ಮಹತ್ವದ್ದಾಗಿದೆ. 144 ಕಲಂ ಅನ್ವಯ ನಿಷೇಧಾಜ್ಞೆ ಹೇರಲು ಅಸಾಧ್ಯ. ಹೀಗಾಗಿ ಜನರ ಸಹಕಾರ ಅತ್ಯಗತ್ಯ ಎಂದು ಪ್ರತಿಪಾದಿಸಿದರು.
ಡಿಸಿಪಿ ಕಿಶೋರಬಾಬು, ಎಸಿಪಿಗಳಾದ ಗಿರೀಶ್, ವಿಜಯಕುಮಾರ, ಸಂಚಾರ ವಿಭಾಗದ ಎಸಿಪಿ ವೀರೇಶ ಕರಡಿಗುಡ್ಡ, ಸಿಪಿಐ ರಮೇಶ್ ಕಾಂಬ್ಳೆ ಇತರರು ಇದ್ದರು.

ಸೋಂಕು ನಿಯಂತ್ರಣಕ್ಕೆ ಸಹಕರಿಸಿ
ಕರೊನಾ ವೈರಸ್ ನಿಯಂತ್ರಣಕ್ಕೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಇದಕ್ಕೆ ಪೂರಕವಾಗಿ ಸಕರ್ಾರಿ ನೌಕರರು ಜಿಲ್ಲಾಡಳಿತದೊಂದಿಗೆ ಕೈಜೋಡಿಸಿ ಹಗಲಿರುಳು ಶ್ರಮಿಸುವಂತೆ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜು ಲೇಂಗಟಿ ಕರೆ ನೀಡಿದ್ದಾರೆ. ಕರೊನಾ ವಿಶ್ವವ್ಯಾಪಿ ಹಬ್ಬಿದ್ದು, ರಾಜ್ಯದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ. ಜಿಲ್ಲಾಧಿಕಾರಿ ಶರತ್ ಬಿ. ನೇತೃತ್ವದ ತಂಡ ಅಗತ್ಯ ಮುನ್ನೆಚ್ಚರಿಕೆ ಕೈಗೊಂಡಿದೆ. ಜಿಲ್ಲಾಡಳಿತಕ್ಕೆ ನೈತಿಕ ಬೆಂಬಲವಾಗಿ ಸರ್ಕಾರದ ಸಲಹೆ ಮತ್ತು ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೌಕರರು ಕಾರ್ಯನಿರ್ವಹಿಸಬೇಕು ಎಂದು ಕೋರಿದ್ದಾರೆ.

ಮುಗಳಖೋಡ ಮಠದಲ್ಲಿ ಜಾತ್ರೆ ರದ್ದು
ಕಲಬುರಗಿ: ಕರೊನಾ ವೈರಸ್ ಭೀತಿ ಮಧ್ಯೆ ಜನರ ಆರೋಗ್ಯದ ಹಿತದೃಷ್ಟಿಯಿಂದ ಜಿಡಗಾ ಮುಗುಳಖೋಡ ಸೇರಿ ಕನರ್ಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗೋವಾ ಸೇರಿ ವಿವಿಧೆಡೆಯ ಶ್ರೀಮಠ ಪರಂಪರೆಯ 380ಕ್ಕೂ ಹೆಚ್ಚಿನ ಶಾಖಾ ಮಠ, ಆಶ್ರಮಗಳಲ್ಲಿ ನಡೆಯುವ ಉತ್ಸವ ಜಾತ್ರೆ, ಸಮಾರಂಭಗಳನ್ನು ಮುಂದೂಡಲಾಗಿದೆ ಎಂದು ಪೀಠಾಧಿಪತಿ ಶ್ರೀ ಡಾ.ಮುರುಘರಾಜೇಂದ್ರ ಸ್ವಾಮೀಜಿತಿಳಿಸಿದ್ದಾರೆ. ರೋಗ ಹರಡದಂತೆ ತಡೆಗಟ್ಟುವುದು ಅವಶ್ಯಕವಾಗಿದೆ. ಈಗಾಗಲೇ ಸಕರ್ಾರ ಅತಂತ್ಯ ಕಾಳಜಿಯಿಂದ ಸೋಂಕು ಹತೋಟಿಗಾಗಿ ಹಗಲಿರುಳು ಶ್ರಮಿಸುತ್ತಿದೆ. ಜನ ಸಹ ಸಕರ್ಾರಕ್ಕೆ ಕೈಜೋಡಿಸಬೇಕಿದ್ದರಿಂದ ಶ್ರೀಮಠದ ಸಭೆ ಸಮಾರಂಭ ಮುಂದೂಡಲಾಗಿದ್ದು, ಭಕ್ತರು ಸಹಕರಿಸಬೇಕು ಎಂದು ಶ್ರೀಗಳು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net