ವಿದೇಶದಲ್ಲಿ ಕರ್ನಾಟಕ ಗತವೈಭವ ಸಾರಿದ ಕಲಾವಿದರು

2
Published on

ವಿಜಯವಾಣಿ ಸುದ್ದಿಜಾಲ ಸರ್ಜಾಪುರ

ಇತ್ತೀಚಿಗೆ ಪ್ಯಾರಿಸ್ ಹಾಗೂ ಬರ್ಲಿನ್ ದೇಶದಲ್ಲಿ ಫ್ರಾನ್ಸ್ ಕನ್ನಡ ಬಳಗ ಮತ್ತು ಬೆಂಗಳೂರಿನ ಆರಂಭ ಟ್ರಸ್ಟ್ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ, ವಿಶ್ವ ಕರ್ನಾಟಕ ಸುವರ್ಣ ಸಂಭ್ರಮ ಪ್ರಯುಕ್ತ ಆಯೋಜಿಸಿದ್ದ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸರ್ಜಾಪುರ ಸಮೀಪದ ತಿಗಳಚೌಡದೇನಹಳ್ಳಿ ನಿವಾಸಿಯೂ ಆದ ಬಿಜೆಪಿ ಹಿರಿಯ ಮುಖಂಡ ಟಿ.ವಿ ಬಾಬು ಅವರಿಗೆ ವಿಶ್ವ ಕಲಾ ಪೋಷಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅಧುನಿಕ ಯುಗದಲ್ಲಿ ಕಲೆ, ಸಂಸ್ಕೃತಿ, ಜಾನಪದ ಸೊಗಡು ಮರೆಯಾಗುತ್ತಿದೆ, ಇಂತಹ ಸಂದರ್ಭದಲ್ಲಿ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಅನ್ಯ ದೇಶಗಳಲ್ಲಿ ನೆಲೆಸಿರುವ ಕನ್ನಡಗರು ರಾಜ್ಯೋತ್ಸವ ಆಚರಣೆ ಮಾಡುತ್ತಿರುವುದು ಮಾದರಿಯ ಸಂಕೇತವಾಗಿದೆ ಎಂದು ವಿಶ್ವ ಕಲಾ ಪೋಷಕ ರತ್ನ ಪ್ರಶಸ್ತಿ ಪುರಸ್ಕೃತ ಟಿ.ವಿ.ಬಾಬು ಹೇಳಿದರು. ರಾಜ್ಯದಿಂದ 18 ಕಲಾವಿದರು ಸಮಾರಂಭದಲ್ಲಿ ಭಾಗವಹಿಸಿದ್ದು, ಜಾನಪದ ಗೀತೆಗಳ ಗಾಯನ, ಶಾಸ್ತ್ರೀಯ ಮತ್ತು ಜಾನಪದ ನೃತ್ಯ, ಕರ್ನಾಟಕ ಗತವೈಭವ ಸಾರುವ ಗೊಂಬೆಯಾಟ ಪ್ರದರ್ಶನ ನೀಡಿದರು.

ಬರ್ಲಿನ್ ದೇಶದ ಭಾರತೀಯ ರಾಯಭಾರಿ ಕಚೇರಿ ಮುಖ್ಯಸ್ಥ ಡಾ.ಮಂದೀಪ್ ಸಿಂಗ್ ತುಲಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಪುಟ್ಟಸ್ವಾಮಿಗೌಡ, ಅಂತಾರಾಷ್ಟ್ರೀಯ ಜಾನಪದ ಗಾಯಕ ಗೋ.ನ.ಸ್ವಾಮಿ, ಗೋಪಿ, ಅಂತಾರಾಷ್ಟ್ರೀಯ ಜಾನಪದ ಕಲಾವಿದೆ ಗೌರಮ್ಮ, ಅಂತಾರಾಷ್ಟ್ರೀಯ ಕನ್ನಡ ಕಲಾವಿದರ ಮತ್ತು ಕಲಾ ಸಂಘ ಸಂಸ್ಥೆಗಳ ಒಕ್ಕೂಟದ ಸಂಚಾಲಕರಾದ ಡಾ.ಕೆ.ಎನ್.ನಾಗೇಶ್, ಜಾನಪದ ಗಾಯಕ ಡಾ.ಬಿ.ಆರ್. ಶಿವಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net