ವಿದೇಶದ ವೈದ್ಯಕೀಯ ಉಪಕರಣಗಳ ಮೇಲಿನ ತೆರಿಗೆ ತಗ್ಗಿಸಿ: ಡಾ.ಬಿ.ಎಸ್.ಅಜಯಕುಮಾರ್

mysore
Published on

ಮೈಸೂರು: ಕ್ಯಾನ್ಸರ್ ರೋಗಕ್ಕೆ ಸಂಬಂಧಿಸಿದ 2 ಔಷಧಕ್ಕೆ ಮಾತ್ರ ಜಿಎಸ್‌ಟಿ ತೆರಿಗೆ ಕಡಿಮೆ ಮಾಡಲಾಗಿದ್ದು, ಇದರ ಪ್ರಯೋಜನ ಕಡಿಮೆಯಷ್ಟೇ. ವಿದೇಶದಿಂದ ಖರೀದಿ ಮಾಡುವ ವೈದ್ಯಕೀಯ ಉಪಕರಣಗಳ ಮೇಲಿನ ಜಿಎಸ್‌ಟಿ ಕಡಿಮೆ ಮಾಡಿಲ್ಲ. ಇದು ಶೇ.32ರಷ್ಟಿದೆ ಎಂದು ಬಿಎಚ್‌ಐಒ ಅಧ್ಯಕ್ಷ ಡಾ.ಬಿ.ಎಸ್.ಅಜಯಕುಮಾರ್ ಹೇಳಿದರು.

ಆಧುನಿಕ ವೈದ್ಯಕೀಯ ಉಪಕರಣಗಳನ್ನು ಸದ್ಯದಲ್ಲಿ ಭಾರತದಲ್ಲೇ ತಯಾರಿಸಲು ಕಷ್ಟಕರ. ಇದು ಭವಿಷ್ಯದಲ್ಲಿ ಆಗಬಹುದು. ಹೀಗಾಗಿ, ವಿದೇಶಗಳಿಂದ ಉಪಕರಣಗಳ ಆಮದು ಅನಿವಾರ್ಯ. ಹೀಗಾಗಿ, ಇವುಗಳ ಮೇಲಿನ ಜಿಎಸ್‌ಟಿ ತೆರಿಗೆ ಕಡಿಮೆ ಮಾಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು

ದೇಶದ ಪ್ರತಿಯೊಬ್ಬರಿಗೂ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಬೇಕು. ವಸ್ತುಗಳ ಖರೀದಿ ಮೇಲೆ ಕೇವಲ ಶೇ.1ರಷ್ಟು ಸೆಸ್ ವಿಧಿಸಿದರೆ 1,500 ಬಿಲಿಯನ್ ಡಾಲರ್ ಸಂಗ್ರಹವಾಗಲಿದೆ. ಇಷ್ಟು ಹಣದಲ್ಲೇ ದೇಶದ ಎಲ್ಲ ಪ್ರಜೆಗಳಿಗೂ ಉಚಿತವಾಗಿ ವೈದ್ಯಕೀಯ ಸೇವೆ ಒದಗಿಸಬಹುದು ಎಂದರು.

ಸಿಗರೇಟ್, ತಂಬಾಕು ಸೇವೆಯಿಂದ ಕ್ರಮವಾಗಿ ಶೇ.40 ಮತ್ತು ಶೇ.38ರಷ್ಟು ಜನರು ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ಇದರಿಂದ ದೂರವಿದ್ದರೆ ರೋಗದಿಂದಲೂ ದೂರ ಇರಬಹುದು. ಬದಲಾದ ಜೀವನ ಶೈಲಿಯೊಂದಿಗೆ ಬೊಜ್ಜುತನವೂ ಕ್ಯಾನ್ಸರ್‌ಗೆ ಮುಖ್ಯ ಕಾರಣವಾಗುತ್ತಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net