ವಿತರಕರಿಂದ ಸಕಾಲಕ್ಕೆ ತಲುಪುವ ಪತ್ರಿಕೆಗಳು

4 ckm 2
ಚಿಕ್ಕಮಗಳೂರಿನ ಹನುಮಂತಪ್ಪ ವೃತ್ತದಲ್ಲಿ ಗುರುವಾರ ಪತ್ರಿಕಾ ವಿತರಕರ ಸಂಘದಿAದ ಆಯೋಜಿಸಿದ್ದ ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪತ್ರಿಕಾ ವಿತರಕರನ್ನು ಸನ್ಮಾನಿಸಲಾಯಿತು. ಶೀಲಾ ದಿನೇಶ್, ವರಸಿದ್ಧಿ ವೇಣುಗೋಪಾಲ್, ಶ್ರೀಧರ್ ಮೋಹನ್, ಓಂಕಾರೇಗೌಡ, ನಂಜುAಡ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ವಿತರಕರಿಂದಾಗಿಯೇ ದಿನಪತ್ರಿಕೆಗಳು ಸಕಾಲದಲ್ಲಿ ಓದುಗರಿಗೆ ತಲುಪುತ್ತಿವೆ. ಗಾಳಿ, ಮಳೆ, ಚಳಿಯನ್ನು ಲೆಕ್ಕಿಸದೆ ಪತ್ರಿಕೆಗಳನ್ನು ಸಮರ್ಪಕವಾಗಿ ತಲುಪಿಸುವ ಕೆಲಸವನ್ನು ವಿತರಕರು ಮಾಡುತ್ತಿರುವುದು ಅಭಿನಂದನೀಯ ಎಂದು ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್ ತಿಳಿಸಿದರು.

ನಗರದ ಹನುಮಂತಪ್ಪ ವೃತ್ತದಲ್ಲಿ ಗುರುವಾರ ಪತ್ರಿಕಾ ವಿತರಕರ ಸಂಘದಿAದ ಆಯೋಜಿಸಿದ್ದ ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪತ್ರಿಕಾ ವಿತರಣೆ ಮಾಡಲು ಸೂಕ್ತ ಜಾಗ ಇಲ್ಲದೆ ವಿತರಕರು ಸಮಸ್ಯೆ ಅನುಭವಿಸುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಶಾಸಕ ಎಚ್.ಡಿ.ತಮ್ಮಯ್ಯ ಅವರೊಂದಿಗೆ ಮಾತನಾಡಿ ವಿತರಕರಿಗೆ ಸೂಕ್ತ ಜಾಗ ನೀಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಶ್ರೀಧರ್ ಮೋಹನ್ ಮಾತನಾಡಿ, ಗಾಳಿ, ಮಳೆಗೆ ದಿನ ಪತ್ರಿಕೆಗಳು ಹಾರಿ ಹೊಗುತ್ತವೆ. ಕೆಲವೊಮ್ಮೆ ನೀರಿನಲ್ಲಿ ನೆನೆದು ಹಾಳಾಗುತ್ತವೆ. ಹೀಗಾಗಿ ನಗರಸಭೆಯಿಂದ ಪತ್ರಿಕಾ ವಿತರಕರಿಗಾಗಿ ಸೂಕ್ತ ಜಾಗ ಗುರುತಿಸಿಕೊಡಬೇಕು ಎಂದು ಮನವಿ ಮಾಡಿದರು.

ನಗರಸಭೆ ಮಾಜಿ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮಾತನಾಡಿ, ನಾನೂ ಪತ್ರಿಕಾ ವಿತರಕನಾಗಿ ಕೆಲಸ ಮಾಡಿz್ದೆÃನೆ. ಹೀಗಾಗಿ ಪತ್ರಿಕಾ ವಿತರಕರ ಸಮಸ್ಯೆಗಳು ವೈಯಕ್ತಿಕವಾಗಿ ನನಗೂ ತಿಳಿದಿವೆ. ಪತ್ರಿಕಾ ವಿತರಕರ ಸಮಸ್ಯೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಓಂಕಾರೇಗೌಡ ಮಾತನಾಡಿ, ಸರ್ಕಾರ ಎಲ್ಲ ಸಂಘ ಸಂಸ್ಥೆಗಳಿಗೆ ಸಹಾಯ ಮಾಡುತ್ತದೆ. ಇದೇ ನಿಟ್ಟಿನಲ್ಲಿ ಪತ್ರಿಕಾ ವಿತರಕರ ಸಂಘಕ್ಕೆ ಸೂಕ್ತ ಜಾಗವನ್ನು ನೀಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಅಭಿಲಾಷ್ ಮಾತನಾಡಿ, ಪತ್ರಿಕೆ ಹಂಚುವ ವಿತರಕರಿಗೆ ಸರ್ಕಾರ ಯೋಜನೆಗಳನ್ನು ರೂಪಿಸಿ ಅವರ ಕಷ್ಟಗಳಿಗೆ ಸ್ಪಂದಿಸಬೇಕು. ಕಂಪನಿಗಳು ವಿತರಕರಿಗೆ ನೀಡುವ ಕಮಿಷನ್ ಹೆಚ್ಚಳ ಮಾಡಬೇಕು ಎಂದು ಹೇಳಿದರು.

ಖಜಾಂಚಿ ನಂಜುAಡ ಮಾತನಾಡಿ, ವಿತರಕರು ಇಲ್ಲದೆ ಪತ್ರಿಕೆಗಳು ಇಲ್ಲ. ಹೀಗಾಗಿ ವಿತರಕರಿಗೆ ಅಪಘಾತಗಳಾದ ಸಂದರ್ಭದಲ್ಲಿ ಸಂಬAಧಿಸಿದವರು ತಕ್ಷಣ ಸ್ಪಂದಿಸಬೇಕು. ಜೊತೆಗೆ ವಿತರಕರಿಗೆ ಜೀವ ವಿಮೆ ಮಾಡಿಸುವ ನಿಟ್ಟಿನಲ್ಲಿ ಆಲೋಚನೆ ಮಾಡಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಗಜೇಂದ್ರ, ಸಹಕಾರ್ಯದರ್ಶಿ ಷಣ್ಮುಖ, ಸದಸ್ಯರಾದ ರಂಜಿತ್, ರಕ್ಷಿತ್, ರಾಕೇಶ್, ಮೋಹನ್, ಸುಜಯ್, ಪ್ರಮುಖರಾದ ಸೋಮನಾಥ ಅಳವಂಡಿ, ಪ್ರಶಾಂತ್, ಅಣ್ಣಪ್ಪ, ಅಭಿಲಾಷ್, ಭಾನು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net