ವಿಠ್ಠಲ ಹೇರೂರ ಪುಣ್ಯಾರಾಧನೆ ೩ಕ್ಕೆ

Vittal Hruru
Published on

ಕಲಬುರಗಿ: ಅಫಜಲಪುರ ದೇವಲಗಾಣಗಾಪುರದಲ್ಲಿ ಕಾಶಿ ಮಾದರಿ ಗಂಗಾರತಿ ಹಾಗೂ ವಿಠ್ಠಲ ಹೇರೂರ ೧೧ನೇ ಪುಣ್ಯಾರಾಧನೆ ಡಿ.೩ರಂದು ನಡೆಯಲಿದೆ ಎಂದು ಜಗದ್ಗುರು ಭಗವಾನ ವೇದವ್ಯಾಸ ಬ್ರಹ್ಮರ್ಷಿ ಪೀಠದ ಬ್ರಹ್ಮರ್ಷಿ ರಾಜಗುರು ಸ್ವಾಮೀಜಿ ಹೇಳಿದರು. ಜಗದ್ಗುರು ಭಗವಾನ ವೇದವ್ಯಾಸ ಬ್ರಹ್ಮರ್ಷಿ ಪೀಠ ಬೆಂಗಳೂರು ಹಾಗೂ ಹೇರೂರ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಲಾಗುತ್ತಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕೆಲ ದಿನಗಳಿಂದ ಯಾದಗಿರಿ ಜಿಲ್ಲೆಯ ದೋರನಳ್ಳಿಯಿಂದ ವಿವಿಧ ಜಿಲ್ಲೆಗಳಲ್ಲಿ ಕೋಲಿ ಸಮುದಾಯದ ಜಾಗೃತಿ ಸಭೆ ನಡೆಸಲಾಗಿದೆ. ದಿ.ವಿಠ್ಠಲ ಹೇರೂರ ಅಭಿಮಾನಿಗಳನ್ನು ಆಹ್ವಾನಿಸಲಾಗಿದೆ. ಹೇರೂರ ಅವರ ಸಮುದಾಯದ ಉನ್ನತಿಯ ಬಗ್ಗೆ ಕಂಡ ನನಸು ಮಾಡಲು ಎಲ್ಲರೂ ಸೇವೆ ಸಲ್ಲಿಸಬೇಕಾಗಿದೆ ಎಂದು ಹೇಳಿದರು. ತೊನಸನಹಳ್ಳಿqs ಶ್ರೀ ಕೊತ್ತಲಪ್ಪ ಸ್ವಾಮೀಜಿ, ದೀಪಕಕುಮಾರ ಪೂಜಾರಿ, ರಾಕೇಶ ಕೋರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net