

ಕಲಬುರಗಿ: ಕೋಲಿ ಸಮಾಜದ ಧೀಮಂತ ನಾಯಕ ವಿಠಲ್ ಹೇರೂರ ಅವರ ಪುಣ್ಯಸ್ಮರಣೆ ನಿಮಿತ್ತ ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಡಿ.17ರಂದು ಬೆಳಗ್ಗೆ ೧೦.೩೦ಕ್ಕೆ ಒಂದು ದಿನದ ಚಿಂತನಗೋಷ್ಠಿ ಹಮ್ಮಿಕೊಳ್ಳಲಾಗಿದೆ ಎಂದು ಮಹರ್ಷಿ ವೇದವ್ಯಾಸ ಮಂಥನ ಮತ್ತು ಪ್ರೇರಣಾ ಟ್ರಸ್ಟ್ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಮುಕ್ಕಾ ತಿಳಿಸಿದರು.
ಟ್ರಸ್ಟ್ ಆಶ್ರಯದಲ್ಲಿ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸ್ವಾಭಿಮಾನಿ ಶ್ರೀ ವಿಠ್ಠಲ ಹೇರೂರ್ ಮೆಟ್ರಿಕ್ ನಂತರದ ಬಾಲಕರ ಉಚಿತ ವಸತಿ ನಿಲಯದಿಂದ ಚಿಂತನಗೋಷ್ಠಿ ಏರ್ಪಡಿಸಲಾಗಿದೆ. ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಜಗದ್ಗುರು ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಸೇರಿ ವಿವಿಧ ಪೂಜ್ಯರು ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಾತಿ ಗಣತಿ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ' ವಿಷಯದ ಕುರಿತು ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ, ಸಾಹಿತಿ ಕೆ.ಎನ್.ಲಿಂಗಪ್ಪ ಉಪನ್ಯಾಸ ನೀಡಲಿದ್ದಾರೆ. ಸಂಸದ ಡಾ.ಉಮೇಶ ಜಾಧವ್, ಶಾಸಕರಾದ ಅಲ್ಲಮಪ್ರಭು ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ, ಡಾ.ಸಾಬಣ್ಣ ತಳವಾರ, ಸಾಬಣ್ಣ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಟ್ರಸ್ಟ್ ಕಾರ್ಯದರ್ಶಿ ಅಭಿಷೇಕ, ಸದಸ್ಯರಾದ ಪ್ರೊ.ಗಿರಿಮಲ್ಲಪ್ಪ ಹರವಾಳ, ಚಂದ್ರಶೇಖರ ಕೋಟರದಸ್ತಿ, ಶರಣಬಸಪ್ಪ ದೊಡ್ಡಮನಿ, ಸೋಮಶೇಖರ ನಾಗಾವಿ ಇತರರಿದ್ದರು.