ವಿಟ್ಲದ ವಿದ್ಯಾರ್ಥಿಗಳು ಪಾಂಚಜನ್ಯ ಸಮುದಾಯ ಬಾನುಲಿ ಕೇಂದ್ರಕ್ಕೆ ಭೇಟಿ

panchajanya
ವಿಟ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಕಾರ್ಯ ಪದವಿ ವಿದ್ಯಾರ್ಥಿಗಳು ಪುತ್ತೂರು ವಿವೇಕಾನಂದ ಕಾಲೇಜಿನ ಪಾಂಚಜನ್ಯ ಸಮುದಾಯ ಬಾನುಲಿ ಕೇಂದ್ರಕ್ಕೆ ಭೇಟಿ ನೀಡಿದರು.
Published on

ಮಂಗಳೂರು: ವಿಟ್ಲ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಮಾಜಕಾರ್ಯ ಪದವಿ ವಿದ್ಯಾರ್ಥಿಗಳು ಪುತ್ತೂರು ವಿವೇಕಾನಂದ ಕಾಲೇಜಿನ ಪಾಂಚಜನ್ಯ ಸಮುದಾಯ ಬಾನುಲಿ ಕೇಂದ್ರಕ್ಕೆ ಭೇಟಿ ನೀಡಿದರು.

ಬಿಎಸ್‌ಡಬ್ಲುೃ ಪಠ್ಯಕ್ರಮದ ಅಂಗವಾಗಿರುವ ರೇಡಿಯೊದಲ್ಲಿ ಕಾರ್ಯಕ್ರಮಗಳು ಬಿತ್ತರಗೊಳ್ಳುವ ಕುರಿತು ಮುಖಾಮುಖಿ ಸಂವಹನದ ಮೂಲಕ ರೇಡಿಯೊ ನಿರ್ದೇಶಕಿ ತೇಜಸ್ವಿನಿ ವಿವರಿಸಿದರು. ರೇಡಿಯೊದ ತಾಂತ್ರಿಕ ರೂಪುರೇಖೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ನೀಡಲಾಯಿತು. ವಿದ್ಯಾರ್ಥಿಗಳಿಂದ ಕಾರ್ಯಕ್ರಮ ವೈವಿಧ್ಯದ ಧ್ವನಿಮುದ್ರಣ ಮಾಡಲಾಯಿತು. ಸಾಮಾಜಿಕ ಜಾಗೃತಿಯ ಪ್ರಹಸನ, ಸಮಾಜಕಾರ್ಯಕ್ಕೆ ಸಂಬಂಧಿಸಿದ ರಸಪ್ರಶ್ನೆ ಮುಂತಾದವುಗಳನ್ನು ಸಮಾಜಕಾರ್ಯ ವಿದ್ಯಾರ್ಥಿಗಳು ನಡೆಸಿಕೊಟ್ಟರು.

ವಿಟ್ಲ ಕಾಲೇಜು ಸಹಾಯಕ ಪ್ರಾಧ್ಯಾಪಕಿ ಡಾ.ಸೌಮ್ಯ ಉಪಸ್ಥಿತರಿದ್ದರು. ಉಪನ್ಯಾಸಕ ಮುಂಡಾಜೆ ಕುಮಾರೇಶ್ವರ ಭಟ್ ಕಾರ್ಯಕ್ರಮ ಆಯೋಜಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net