ವಿಟಿಯು ಸಿಬ್ಬಂದಿ ತಂಡ ಚಾಂಪಿಯನ್

2Manju2
Published on

ಬೆಳಗಾವಿ: ಇಲ್ಲಿನ ಜಿಐಟಿ ಮೈದಾನದಲ್ಲಿ ಇತ್ತೀಚೆಗೆ ವ್ನಿೇಶ್ವರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಕ್ರಿಕೆಟ್ ಸ್ಪರ್ಧೆಯ ರಜತ ವರ್ಷಾಚರಣೆ ಸ್ಪರ್ಧೆಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಸಿಬ್ಬಂದಿ ಕ್ರಿಕೆಟ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಸ್ಪರ್ಧೆಯಲ್ಲಿ ನಗರದ ಇಂಜಿನಿಯರಿಂಗ್ ಕಾಲೇಜುಗಳು, ಹೆಸ್ಕಾಂ, ಎಂಆರ್, ವೇಗಾ ಹೆಲ್ಮೆಟ್ಸ್, ಡಾಕ್ಟರ್ಸ್ ಇಲೆವೆನ್ ಸೇರಿ ವಿವಿಧ ಕಂಪನಿಗಳ ಸಿಬ್ಬಂದಿ ಒಳಗೊಂಡಿದ್ದ ಒಟ್ಟು 44 ತಂಡಗಳು ಭಾಗವಹಿಸಿದ್ದವು. ಟೂರ್ನಿಯಲ್ಲಿ ಮೊದಲ ಪಂದ್ಯದಿಂದಲೂ ಅತ್ಯುತ್ತಮ ಪ್ರದರ್ಶನ ತೋರಿದ ವಿಟಿಯು ಸಿಬ್ಬಂದಿ ತಂಡ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಿಐಟಿ ಸಿಬ್ಬಂದಿ ತಂಡವನ್ನು, ಸೆಮಿ ಫೈನಲ್ನಲ್ಲಿ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ತಂಡವನ್ನು ಹಾಗೂ ಫೈನಲ್ ಪಂದ್ಯದಲ್ಲಿ ಸ್ವರಾಜ್ ಸ್ಪೋರ್ಟ್ಸ ಕ್ಲಬ್ ತಂಡವನ್ನು ಸೋಲಿಸುವ ಮೂಲಕ ಸತತವಾಗಿ ಎರಡನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿತು.

ವಿಟಿಯು ತಂಡದ ಮಂಗೇಶ ದೇವಲಾಪುರ ಸರಣಿ ಸರ್ವೋತ್ತಮ ಪ್ರಶಸ್ತಿಗೆ ಭಾಜನರಾದರು. ರಾಕೇಶ ಖಾನಾಪುರೆ ಅವರು ಉತ್ತಮ ಬ್ಯಾಟ್ಸಮನ್ ಪ್ರಶಸ್ತಿ ಪಡೆದುಕೊಂಡರು. ತಂಡದ ಸಾಧನೆಗೆ ವಿಟಿಯು ಕುಲಪತಿ ಪ್ರೊ. ಎಸ್.ವಿದ್ಯಾಶಂಕರ, ಕುಲಸಚಿವ ಪ್ರೊ.ಬಿ. ಇ.ರಂಗಸ್ವಾಮಿ, ಮೌಲ್ಯಮಾಪನ ಕುಲಸಚಿವ ಪ್ರೊ ಟಿ.ಎನ್.ಶ್ರೀನಿವಾಸ, ಹಣಕಾಸು ಅಧಿಕಾರಿಗಳಾದ ಎಂ.ಇ. ಸಪ್ನಾ ಇತರರು ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net