ವಿಜ್ಞಾನಿಗಳ ಪಟ್ಟಿ ಗೆ ವಿವಿಯ ಮೂವರಿಗೆ ಸ್ಥಾನ

Published on

ಬಳ್ಳಾರಿ : ವಿಶ್ವದ ಪ್ರತಿಷ್ಠಿತ ಅಮೆರಿಕದ ಸ್ಟಾೃನ್‌ಫೋರ್ಡ್ ವಿಶ್ವವಿದ್ಯಾಲಯ ವಾರ್ಷಿಕವಾಗಿ ಪ್ರಕಟಿಸುವ ಜಗತ್ತಿನ ಖ್ಯಾತ ವಿಜ್ಞಾನಿಗಳ ಪಟ್ಟಿಯಲ್ಲಿ ಇಲ್ಲಿನ ವಿಎಸ್‌ಕೆ ವಿವಿಯ ಮೂವರು ಪ್ರಾಧ್ಯಾಪಕರು ಸ್ಥಾನ ಪಡೆದಿದ್ದಾರೆ.
ವಿವಿಯ ಗಣಿತಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ. ಕೆ. ಪ್ರಸಾದ್, ಗಣಿತಶಾಸ್ತ್ರದ ಮತ್ತು ಗಣಕ ವಿಜ್ಞಾನ ವಿಭಾಗದ
ಮುಖ್ಯಸ್ಥ ಪ್ರೊ. ಹನುಮೇಶ್ ವೈದ್ಯ, ಗಣಿತಶಾಸ್ತ್ರದ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಪಿ. ಅಶ್ವಿನ್ ಸ್ಥಾನ ಪಡೆದಿದ್ದಾರೆ. ಅಲ್ಲದೆ, ಪ್ರೊ. ಹನುಮೇಶ್ ವೈದ್ಯ ಅವರು ಸತತ ಎರಡನೆ ಬಾರಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ವಿಶ್ವದರ್ಜೆಯ ಗುಣಮಟ್ಟದ ಸಂಶೋಧನಾ ಲೇಖನಗಳನ್ನು ವೆಬ್ ಆಫ್ ಸೈನ್ಸ್, ಸ್ಕೋಪಸ್, ಗೂಗಲ್ ಸ್ಕಾಲರ್, ಎಚ್ ಇಂಡೆಕ್ಸ್, ಇಂಪ್ಯಾಕ್ಟ್ ಫ್ಯಾಕ್ಟರ್, ಸೈಟೇಷನ್ ಹೀಗೆ ಹಲವಾರು ಸಂಯೋಜಿತ ಮಾನದಂಡಗಳನ್ನು ಆಧರಿಸಿ ವಿಶ್ವದ ಉತ್ತಮ ಸಂಶೋಧಕರನ್ನು ಗುರುತಿಸಿ ವಾರ್ಷಿಕವಾಗಿ ವಿವಿ ಪಟ್ಟಿ ಬಿಡುಗಡೆ ಮಾಡುತ್ತದೆ. ಗುಣಮಟ್ಟದ ಸಂಶೋಧನಾ ಲೇಖನಗಳನ್ನು ಪ್ರಕಟಿಸಲು
ಹೆಸರುವಾಸಿಯಾಗಿರುವ ಎಲ್ಸ್ವಿಯರ್ ಸಂಸ್ಥೆ ಸಹಭಾಗಿತ್ವದಲ್ಲಿ ಸ್ಟ್ಯಾನ್‌ಫೋರ್ಡ ವಿಶ್ವವಿದ್ಯಾಲಯವು ಕಳೆದ ವಾರ ಪಟ್ಟಿ ಬಿಡುಗಡೆ
ಮಾಡಿದೆ. ಪ್ರಪಂಚದ ಒಟ್ಟು ಸಂಶೋಧನಕಾರರಲ್ಲಿ ಶೇ. 2 ರಷ್ಟು ಖ್ಯಾತನಾಮ ವಿಜ್ಞಾನಿಗಳನ್ನು ಸಂಶೋಧನೆಗೆ ಸಂಬಂಧಿಸಿದ ವಿವಿಧ
ವರ್ಗಗಳಲ್ಲಿ ವಿಂಗಡಿಸಿ ಪಟ್ಟಿ ಅಂತಿಮಗೊಳಿಸಿದೆ. ಮೂವರು ಪ್ರಾಧ್ಯಾಪಕರ ಸಾಧನೆಗೆ ವಿವಿ ಕುಲಪತಿ ಪ್ರೊ. ಎಂ ಮುನಿರಾಜು, ಕೊಪ್ಪಳ ವಿವಿ ಕುಲಪತಿ ಪ್ರೊ. ಬಿ ಕೆ ರವಿ, ಕುಲಸಚಿವ ಎಸ್. ಎನ್. ರುದ್ರೇಶ್ ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net