ವಿಜ್ಞಾನದ ಮಹತ್ವ ಅರಿಯಿರಿ

Published on

ಚಾಮರಾಜನಗರ: ವಿಜ್ಞಾನದ ಮಹತ್ವವನ್ನು ಅರ್ಥ ಮಾಡಿಕೊಂಡಾಗ ಸಾಧನೆ ಮಾಡಬಹುದು ಎಂದು ಸಂಸ್ಕೃತಿ ಚಿಂತಕ ಸುರೇಶ್ ಋಗ್ವೇದಿ ತಿಳಿಸಿದರು.

ನಗರದ ಋಗ್ವೇದಿ ಕುಟೀರದ ಜೈ ಹಿಂದ್ ಕಟ್ಟೆಯಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಸರ್ ಸಿ. ವಿ. ರಾಮನ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಜ್ಞಾನ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಮತ್ತಷ್ಟು ದೃಢೀಕರಿಸಿ ವಿದ್ಯಾರ್ಥಿಗಳು ಹಾಗೂ ಯುವಕರಲ್ಲೇ ಹೊಸ ಹೊಸ ಆಲೋಚನೆಗೆ ಚರ್ಚೆಗೆ ರಾಮನ್ ಸ್ಫೂರ್ತಿಯಾದರು ಎಂದರು.

ಸಿ.ವಿ.ರಾಮನ್ ಅವರ ಭಾವಚಿತ್ರಕ್ಕೆ ಹಿರಿಯ ನಾಗರೀಕ ಎನ್.ರಾಜಗೋಪಾಲ್ ಪುಷ್ಪಾರ್ಚನೆ ಮಾಡಿದರು. ಜಯಂ ಪ್ರತಿಷ್ಠಾನದ ರವಿ, ನಾಗೇಂದ್ರ, ವಿಜಯಲಕ್ಷ್ಮಿ ,ಮುರುಗೇಶ್, ಶ್ರಾವ್ಯ ಋಗ್ವೇದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net