ವಿಜೇತ ತಂಡಗಳಿಗೆ ಬಹುಮಾನ ವಿತರಣೆ

26Ravig8
ಲಿಂಗನಮಠ ಕ್ರೀಡಾ ಸಮಿತಿಯಿಂದ ಡಾ.ಸೋನಾಲಿ ಸರ್ನೋಬತ್ ಅವರನ್ನು ಸನ್ಮಾನಿಸಲಾಯಿತು. ಶಿವಾನಂದ ಗೋಧೋಳ್ಳಿ, ಮಾರುತಿ ಹರಿಜನ, ರಾಜು ರಪಾಟೆ, ಡಾ.ಕಲ್ಲಯ್ಯ ಹಿರೇಮಠ, ತವನಪ್ಪ ರಪಾಟೆ, ಸರೋಜಾ ಬಾಗೇವಾಡಿ, ಭಾರತಿ ತಕಡಿ ಇದ್ದರು.
Published on

ಬೆಳಗಾವಿ: ಖಾನಾಪುರ ತಾಲೂಕಿನ ಲಿಂಗನಮಠ ಗ್ರಾಮದಲ್ಲಿ ಆಯೋಜಿಸಿದ್ದ ಲಿಂಗನಮಠ ಪ್ರೀಮಿಯರ್ ಲೀಗ್‌ನ ವಿಜೇತ ತಂಡಗಳಿಗೆ ಪ್ರಥಮ 50 ಸಾವಿರ ರೂ., ದ್ವಿತೀಯ 25 ಸಾವಿರ ರೂ. ಹಾಗೂ ತೃತೀಯ ಬಹುಮಾನವಾಗಿ 10 ಸಾವಿರ ರೂ. ಮೊತ್ತದ ಚೆಕ್ ಅನ್ನು ಬಿಜೆಪಿ ನಾಯಕಿ ಡಾ.ಸೋನಾಲಿ ಸರ್ನೋಬತ್ ಭಾನುವಾರ ಸಮಿತಿಗೆ ಹಸ್ತಾಂತರಿಸಿದರು. ಮುಂದಿನ ವರ್ಷದಿಂದ ಪೂರ್ವ ಖಾನಾಪುರವು ಗ್ರ್ಯಾಂಡ್ ಪ್ರೀಮಿಯರ್ ಲೀಗ್ ಅನ್ನು 5 ಲಕ್ಷ ರೂ.ಮೌಲ್ಯದ ಆಕರ್ಷಕ ಬಹುಮಾನಗಳೊಂದಿಗೆ ನಡೆಯಲಿದೆ ಎಂದರು. ಜಿಪಂ ಮಾಜಿ ಅಧ್ಯಕ್ಷ ಶಿವಾನಂದ ಗೋಧೋಳ್ಳಿ, ತಾಪಂ ಮಾಜಿ ಸದಸ್ಯ ಮಾರುತಿ ಹರಿಜನ, ರಾಜು ರಪಾಟೆ, ಡಾ.ಕಲ್ಲಯ್ಯ ಹಿರೇಮಠ, ತವನಪ್ಪ ರಪಾಟೆ, ಸರೋಜಾ ಬಾಗೇವಾಡಿ, ಭಾರತಿ ತಕಡಿ, ಅನಸೂಯಾ ಅಗಸರ, ಅನಿತಾ ಕೋಲ್ಮಸ್ಕರ್, ಕುಶ ಅಂಬೋಜಿ, ಬಾಳೇಶ ಚವಣ್ಣವರ, ದೀಪಕ ಮಾಟೊಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net