ವಿಜೃಂಭಣೆಯಿಂದ ನಡೆದ ಶ್ರೀ ಕಾಳಿಕಾಂಬ ರಥೋತ್ಸವ

ವಿಜೃಂಭಣೆಯಿಂದ ನಡೆದ ಶ್ರೀ ಕಾಳಿಕಾಂಬ ರಥೋತ್ಸವ
Published on

ಹಾಸನ: ನಗರದ ಗಾಂಧಿ ಬಜಾರಿನ ಬಳಿ ಇರುವ ದೇಗುಲದಲ್ಲಿ 5ನೇ ದಿನದಂದು ಶ್ರೀ ಕ್ಷೇತ್ರ ಕಾಳಿಕಾಂಬ-ಕಮಠೇಶ್ವರ ರಥೋತ್ಸವವು ವಿವಿಧ ಸಾಂಸ್ಕೃತಿಕ ಕಲಾತಂಡದೊಡನೆ ಶನಿವಾರ ವಿಜೃಂಭಣೆಯಿಂದ ನೆರೆವೇರಿತು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಭವಾನಿ ರೇವಣ್ಣರವರು ರಥೋತ್ಸವದಲ್ಲಿ ಭಾಗಿಯಾಗಿ ದೇವರಿಗೆ ಪುಷ್ಪಾರ್ಚನೆ ನೆರವೇರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಭವಾನಿ ರೇವಣ್ಣ, ವಿಶ್ವಕರ್ಮ ಸಮಾಜದವರು ಒಗ್ಗಟ್ಟಾಗಿ ಶ್ರೀ ಕಾಳಿಕಾಂಬ ದೇವಸ್ಥಾನದ ಜಾತ್ರೆ ನೆರವೇರಿಸಲಾಗುತ್ತಿದ್ದು, ಉರಿ ಬಿಸಿಲನ್ನು ಲೆಕ್ಕಿಸದೆ ದೇವರ ರಥೋತ್ಸವದಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ನೂತನವಾಗಿ ನಿರ್ಮಿಸಿರುವ ಕ್ಷೇತ್ರ ಕಾಳಿಕಾಂಬ-ಕಮಠೇಶ್ವರ ದೇವಾಲಯ ತುಂಬಾ ಚೆನ್ನಾಗಿ ಮೂಡಿಬಂದಿದೆ. ಎಲ್ಲರಿಗೂ ದೇವರು ಒಳ್ಳೆಯದನ್ನು ಮಾಡಲಿ ಎಂದು ಶುಭ ಹಾರೈಸಿದರು.
ಶ್ರೀ ಕಾಳಿಕಾಂಬ-ಕಮಠೇಶ್ವರ ದೇವಾಲಯ ನವೀಕರಣ ಸಮಿತಿ ಪ್ರಧಾನ ಕಾರ್ಯದರ್ಶಿ ಎಚ್.ವಿ. ಹರೀಶ್ ಮಾತನಾಡಿ, ಮಾ.26 ರಿಂದ 30ರವರೆಗೂ ಹಾಸನ ನಗರದ ಗಾಂಧಿ ಬಜಾರಿನ ಬಳಿ ಇರುವ ಶ್ರೀ ಕ್ಷೇತ್ರ ಕಾಳಿಕಾಂಬ-ಕಮಠೇಶ್ವರ ದೇವಾಲಯದ ಬಿಂಬ ಪ್ರತಿಷ್ಠಾಪನೆ ಹಾಗೂ ಬ್ರಹ್ಮ ಕಳಶೋತ್ಸವ ಸಂಭ್ರಮದಿಂದ ನೆರವೇರಿದೆ. ಕಾರ್ಯಕ್ರಮದ ಕೊನೆಯ ದಿವಸದಂದು ಅರಕಲಗೂಡು ತಾಲೂಕಿನ ಅರೇಮಾದನಹಳ್ಳಿ ಮಠದ ಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮೀಜಿಗಳು ನೇತೃತ್ವದಲ್ಲಿ ಶ್ರೀ ಕಾಳಿಕಾಂಬ ದೇವರ ಉತ್ಸವ ನಡೆದಿದೆ. ಶನಿವಾರ ಬೆಳಗಿನಿಂದ ರುದ್ರಹೋಮ, ಗುರುಹೋಮ, ವೆಂಕಟೇಶ್ವರ ಹೋಮ, ಆಂಜನೇಯ ಹೋಮ, ನವಗ್ರಹ ಹೋಮ, ಮಹಾಪೂಜೆ, ಆಚಾರ್ಯ ಪೂಜೆ, ದಂಪತಿ ಪೂಜೆ, ಪೂರ್ಣಾಹುತಿ ಎಲ್ಲವೂ ಗುರುಗಳ ಸಮಕ್ಷಮದಲ್ಲಿ ವೈದಿಕ ಫಲಮಂತ್ರಾಕ್ಷತೆ ವೈದಿಕ ಸಂಭಾವನೆ, ಕರ್ಮಸಮಾಪ್ತಿ ನಂತರ ಮಹಾಪ್ರಸಾದ ನೆರವೇರಿದೆ ಎಂದು ಹೇಳಿದರು.
ರಥೋತ್ಸವದಲ್ಲಿ ನಾದಸ್ವರ, ಚಂಡೆವಾದ, ಡೋಳ್ಳು ಕುಣಿತ, ವೀರಗಾಸೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಪ್ರದರ್ಶನ ಎಲ್ಲರನ್ನು ಆಕರ್ಷಿಸಿದವು. ಮೆರವಣಿಗೆಯಲ್ಲಿ ಮಹಿಳೆಯರು ಒಂದೇ ತರಹದ ಸಮವಸ್ತ್ರ ಧರಿಸಿ ಹೆಜ್ಜೆ ಹಾಕಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡರಾದ ಗಿರೀಶ್ ಚನ್ನವೀರಪ್ಪ, ಪ್ರಸನ್ನ, ಎಚ್.ಬಿ. ಗೋಪಾಲ್, ವಿಶ್ವಕರ್ಮ ಸಮಾಜದ ಅಧ್ಯಕ್ಷ ಎಚ್.ಬಿ. ಕುಮಾರಾಚಾರ್, ಶ್ರೀ ಕಾಳಿಕಾಂಬ-ಕಮಠೇಶ್ವರ ದೇವಾಲಯ ನವೀಕರಣ ಸಮಿತಿ ಅಧ್ಯಕ್ಷ ಎಚ್.ಕೆ.ಆನಂದಾಚಾರ್, ಉಪಾಧ್ಯಕ್ಷ ಎಚ್.ಎಚ್.ಶ್ರೀನಿವಾಸ್, ಮುಖಂಡರಾದ ಬ್ಯಾಟರಂಗಾಚಾರ್, ಕೇಶವಪ್ರಸಾದ್, ಅನಿಲ್ ಪದ್ಮನಾಬ್, ಎಚ್.ಕೆ. ಸತೀಶ್, ಶ್ರೀನಿವಾಸ್, ಗೋಪಾಲಾಚಾರ್, ಶ್ರೀಕಂಠಮೂರ್ತಿ, ಲೋಕೇಶ್, ಸುರೇಶ್, ಆನಂದ್, ನಾಗೇಶ್ ಮತ್ತು ಮೋಹನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net