

ಹಾಸನ: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ಕನ್ನಂಬಾಡಿಯಮ್ಮ ಮತ್ತು ಶ್ರೀ ಕೆಂಚಾಂಬ ಜಾತ್ರಾ ಮಹೋತ್ಸವ ಶುಕ್ರವಾರ ಬೆಳಿಗ್ಗೆ ದೇವರ ಉತ್ಸವ ವಿವಿಧ ಸಾಂಸ್ಕೃತಿಕ ಕಲಾ ತಂಡದೊಡನೆ ವಿಜೃಂಭಣೆಯಿಂದ ಜರುಗಿತು. ನಗರದ ಗಾಣಿಗರ ಬೀದಿಯಲ್ಲಿರುವ ಶ್ರೀ ಕನ್ನಂಬಾಡಿಯಮ್ಮ ಮತ್ತು ಶ್ರೀ ಕೆಂಚಾಂಬ ದೇವರ ಅಡ್ಡೆಯನ್ನು ಭಕ್ತಾದಿಗಳು ಹೊತ್ತಿಕೊಂಡು ಪ್ರಮುಖ ರಾಜ ಬೀದಿಗಳಲ್ಲಿ ಸಾಗಿದರು.
ಗಾಣಿಗರ ಸಮಾಜದ ಅಧ್ಯಕ್ಷರಾದ ಸತೀಶ್ ಕುಮಾರ್ ಅವರು ಮಾಧ್ಯಮದೊಂದಿಗೆ ಮಾತನಾಡಿ, ಕಳೆದ 50 ವರ್ಷಗಳಿಂದ ಗಾಣಿಗ ಸಮಾಜದ ಕುಲಬಾಂಧವರು ಶ್ರೀ ಕನ್ನಂಬಾಡಿಯಮ್ಮ ಮತ್ತು ಶ್ರೀ ಕೆಂಚಾಂಬ ಜಾತ್ರೆಯನ್ನು ಶ್ರದ್ಧೆ- ಭಕ್ತಿಯಿಂದ ನಡೆಸಿಕೊಂಡು ಬರುತ್ತಿದ್ದಾರೆ. ಎಲ್ಲರಿಗೂ ಆರೋಗ್ಯ, ಆಯಾಸ್ಸು ಕೊಡಲೆಂದು ದೇವರಲ್ಲಿ ಪ್ರಾರ್ಥಿಸಿದ್ದೇವೆ. ಸಂಭ್ರಮದಿಂದ ಜಾತ್ರೆ ನಡೆಯಲು ನಮ್ಮ ಕುಲ ಬಾಂಧವರು ಸಹಕಾರ ಕೊಟ್ಟಿರುವುದಕ್ಕೆ ಧನ್ಯವಾದಗಳನ್ನು ತಿಳಿಸುತ್ತೇವೆ ಎಂದು ಹೇಳಿದರು.
ಇದೇ ವೇಳೆ ಗಾಣಿಗರ ಸಮಾಜದ ಉಪಾಧ್ಯಕ್ಷ ರವಿಕುಮಾರ್, ಕಾರ್ಯದರ್ಶಿ ಲೋಕೇಶ್, ಖಜಾಂಚಿ ಹರೀಶ್, ನಗರಸಭೆ ಮಾಜಿ ಸದಸ್ಯ ಅರುಣ್ ಕುಮಾರ್, ಬಾಬು, ನಿರ್ದೇರ್ಶಕರಾದ ಭಾಗ್ಯಣ್ಣ, ಶ್ರೀನಿವಾಸ್ ಬಾಬು ಸೇರಿದಂತೆ ಇತರರು ಉಪಸ್ಥಿತರಿದ್ದರು.