

ಚಾಮರಾಜನಗರ: ನಗರದ ರಾಮಸಮುದ್ರ ಸಮೀಪದಲ್ಲಿರುವ ಸೈಯದ್ ದಿಲ್ಬಕ್ಷ ಶಾ ಖಾದರ್ ವಲಿ ದರ್ಗಾದಲ್ಲಿ ಬುಧವಾರ ಗಂಧೊತ್ಸವ ವಿಜೃಂಭಣೆಯಿಂದ ಜರುಗಿತು.
ಸೈಯದ್ ಶಾ ಬಾಬಾ, ತಾಜ್ ಬಾಬಾ ಪೆನ್ಕುಂಡ ಅವರ ಉಪಸ್ಥಿತಿಯಲ್ಲಿ ನಡೆದ ಗಂಧೊತ್ಸವದಲ್ಲಿ ನೂರಾರು ಭಕ್ತರು ಉತ್ಸಹದಿಂದ ಭಾಗಿಯಾಗಿದ್ದರು. ಗಂಧೊತ್ಸವಕ್ಕೆ ಆಗಮಿಸಿದ ಭಕ್ತರಿಗೆ ದರ್ಗಾ ಆಡಳಿತ ಮಂಡಳಿಯ ವತಿಯಿಂದ ಅನ್ನದಾಸೋಹದ ವ್ಯವಸ್ಥೆ ಏರ್ಪಡಿಸಲಾಗಿತ್ತು.
ಈ ಸಂಧರ್ಭದಲ್ಲಿ ವಕ್ಫ ಸೈಯದ್ ಸಗೀರ್ ಉಲ್ಲಾ ಶಾ ಪೆನ್ಕುಂಡ, ಜಿಲ್ಲಾವಕ್ಫ ಮಂಡಳಿ ಉಪಾಧ್ಯಕ್ಷ ಸೈಯದ್ ಕಲಾಂ ಉಲ್ಲಾ ಶಾ, ಸೈಯದ್ ಇಮ್ರಾನ್ ಶಾ ರಫಾಯಿ, ದರ್ಗಾ ಆಡಳಿತ ಮಂಡಳಿಯ ಅಧ್ಯಕ್ಷ ಅಬ್ರಾರ್ ಸುಲ್ತಾನ್, ಕಾರ್ಯದರ್ಶಿ ಅಯೂಬ್ ಉಲ್ಲಾ ಖಾನ್, ಸುಹೇಲ್ ಆಲಿಖಾನ್, ಫಹೀಮ್ ಉಲ್ಲಾ ಖಾನ್, ಇಮ್ರಾನ್ ಖಾನ್, ಜಿಯಾವುಲ್ಲಾ ಶರ್ೀ, ನೀಸಾರ್ ಅಹ್ಮದ್ ಖಾನ್, ಮಹಮ್ಮದ್, ಅಸ್ಜಲ್ ಶರೀಫ್ ಇತರರು ಭಾಗಿಯಾಗಿದ್ದರು.