ವಿಜೃಂಭಣೆಯ ಹೇಮಾದ್ರಂಬ ದೇವಿ ರಥೋತ್ಸವ

12BANNU1
ಬನ್ನೂರಿನಲ್ಲಿ ಭಾನುವಾರ ಹೇಮಾದ್ರಂಬ ದೇವಿಯ ರಥೋತ್ಸವ ವಿಜೃಂಭಣೆಯಿಂದ ನಡೆಯಿತು.
Published on

ಬನ್ನೂರು: ಹೇಮಾದ್ರಂಬ ದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ಪಟ್ಟಣದಲ್ಲಿ ದೇವಿ ರಥೋತ್ಸವವು ವಿಜೃಂಭಣೆಯಿಂದ ನಡೆಯಿತು.

ರಥ ಸಾಗುವ ರಾಜ ಬೀದಿಯಲ್ಲಿ ಮುಂಜಾನೆ 6 ಗಂಟೆಗೆ ದೇವಿ ತೀರ್ಥವನ್ನು ಹಾಕುವ ಮೂಲಕ ರಸ್ತೆಯನ್ನುಪರಿಶುದ್ಧಗೊಳಿಸಲಾ ಯಿತು. ನಂತರ ಮಂಗಳ ವಾದ್ಯದೊಂದಿಗೆ ಮೂರ್ತಿಯನ್ನು ರಥದ ಸುತ್ತ ಪ್ರದಕ್ಷಿಣೆ ಮಾಡಿ ರಥದ ಮೇಲೆ ಪ್ರತಿಷ್ಠಾಪಿಸಲಾಯಿತು. ಈ ವೇಳೆ ಭಕ್ತರ ಘೋಷಣೆ ಮುಗಿಲು ಮುಟ್ಟುತ್ತಲೇ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಒಂದೆಡೆ ದೇವಿಯ ಕರಗವನ್ನು ಹೊತ್ತ ಭಕ್ತರು ನಿನಾದಕ್ಕೆ ಹೆಜ್ಜೆಯನ್ನು ಹಾಕುತ್ತಿದ್ದರೆ, ಮತ್ತೊಂದೆಡೆ ಮಂಗಳವಾದ್ಯದ ಮೆರವಣಿಗೆ ರಥೋತ್ಸವಕ್ಕೆ ಭವ್ಯ ಮೆರಗು ನೀಡಿತು.

ತೇರಿನ ಬೀದಿ ಮೂಲಕ ಹೊರಟ ರಥ ದೊಡ್ಡಂಗಡಿ ಬೀದಿಯ ಮೂಲಕ ಸಾಗಿ ದೇವಾಲಯದ ಸ್ವಸ್ಥಾನವನ್ನು ಸೇರಿತು. ರಥೋತ್ಸವ ದಲ್ಲಿ ಪಾಲ್ಗೊಂಡಿದ್ದವರಿಗೆ ವಿವಿಧ ಸಂಘದ ವತಿಯಿಂದ ಮಜ್ಜಿಗೆ, ಪಾನಕವನ್ನು ಅಲ್ಲಲ್ಲಿ ವಿತರಿಸಲಾಯಿತ್ತು. ಬಸ್ ನಿಲ್ದಾಣದ ಬಳಿಯೂ ಹರಕೆ ಹೊತ್ತ ಭಕ್ತರಿಂದ ಪ್ರಸಾದ ವಿತರಣೆ ಮಾಡಲಾಯಿತು.

ಸೋಮವಾರ ತೆಪ್ಪೋತ್ಸವ: ಫೆ.13ರಂದು ಮಾಕನಹಳ್ಳಿಯ ಹೆಗ್ಗೆರೆಯಲ್ಲಿ ದೇವಿಯ ತೆಪ್ಪೋತ್ಸವ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಗ್ರಾಮದ ರಸ್ತೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net