ವಿಜೃಂಭಣೆಯ ಸೀತಾ ಕಲ್ಯಾಣೋತ್ಸವ

Published on

ಗುಂಡ್ಲುಪೇಟೆ: ಪಟ್ಟಣದ ದಾಸ ಬಣಜಿಗ ರಾಮಮಂದಿರದಲ್ಲಿ ಬುಧವಾರ ಸೀತಾ ಕಲ್ಯಾಣೋತ್ಸವವನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು.

ಈ ಅಂಗವಾಗಿ ಮಂಗಳವಾರದಿಂದಲೇ ರಾಮಮಂದಿರ ಹಾಗೂ ರಸ್ತೆಗಳಲ್ಲಿ ದೀಪಾಲಂಕಾರ ಮಾಡಿ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಬುಧವಾರ ಬೆಳಗ್ಗೆ ಸೀತಾ ಕಲ್ಯಾಣೋತ್ಸವದ ನಂತರ ಸೀತೆ ಮತ್ತು ರಾಮರ ಉತ್ಸವ ಮೂರ್ತಿಗಳನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಜನಾಂಗದ ಮುಖಂಡರು, ಯುವಕರು ಮತ್ತು ಮಹಿಳೆಯರು ಮತ್ತು ಮಕ್ಕಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net