ವಿಜೃಂಭಣೆಯ ಸಿದ್ದೇಶ್ವರಸ್ವಾಮಿ ಕೆಂಡೋತ್ಸವ

ವಿಜೃಂಭಣೆಯ ಸಿದ್ದೇಶ್ವರಸ್ವಾಮಿ ಕೆಂಡೋತ್ಸವ
Published on

 ಹಾಸನ: ಹಾಸನಾಂಬ ದೇಗುಲದ ಸಮೀಪದಲ್ಲೇ ಇರುವ ಸಿದ್ದೇಶ್ವರಸ್ವಾಮಿಯ ಕೆಂಡೋತ್ಸವ ಭಾನುವಾರ ಮುಂಜಾನೆ ವಿಜೃಂಭಣೆಯಿಂದ ನೆರವೇರಿತು. ನೂರಾರು ಭಕ್ತರೊಂದಿಗೆ ಶಾಸಕ ಎಚ್.ಪಿ.ಸ್ವರೂಪ್ ಅವರು ಕೆಂಡ ಹಾಯ್ದು ಭಕ್ತಿ ಸಮರ್ಪಿಸಿದರು.

ಶನಿವಾರ ರಾತ್ರಿ ಸಿದ್ದೇಶ್ವರಸ್ವಾಮಿ ಮತು ವೀರಭದ್ರೇಶ್ವರ ಸ್ವಾಮಿಯ ಉತ್ಸವ ಮೂರ್ತಿಗಳ ಮೆರವಣಿಗೆ ನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸಿ ಮುಂಜಾನೆ ವೇಳೆಗೆ ದೇಗುಲದ ಆವರಣಕ್ಕೆ ಮರಳಿದವು. ಈ ವೇಳೆ ದೇಗುಲದ ಹೊರ ಭಾಗದಲ್ಲಿ ನೆರೆದಿದ್ದ ಸಾವಿರಾರು ಭಕ್ತರು ಕೆಂಡದ ಮೇಲೆ ನಡೆದು ಭಕ್ತಿಭಾವ ಮೆರೆದರು. ಶಾಸಕ ಎಚ್.ಪಿ.ಸ್ವರೂಪ್ ಅವರು ಕೂಡ ಅರ್ಚಕರ ಕೈ ಹಿಡಿದುಕೊಂಡು ಕೆಂಡ ಹಾಯ್ದು ಗಮನ ಸೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net