

ಮದ್ದೂರು: ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಮದ್ದೂರಮ್ಮನ ದೇಗುಲದ ಆವರಣದಲ್ಲಿ ಗುರುವಾರ ಸಿಡಿ ಉತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ನೆರವೇರಿತು.
ಸಂಜೆ 4 ಗಂಟೆಗೆ ಪಟ್ಟಣದ ಮಠಮನೆಯಿಂದ ಭಕ್ತರಿಂದ ಬಾಯಿ ಬೀಗ ಸೇವೆ ಸಮೇತ ಶ್ರೀ ಸಿಡಿರಣ್ಣ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೃಹತ್ ಮೆರವಣಿಗೆಯೊಂದಿಗೆ ಆಗಮಿಸಿದಾಗ ಭಕ್ತರು ಸಿಡಿರಣ್ಣನ ಮೂರ್ತಿಗೆ ಕಡ್ಲೆಪುರಿ ಸುರಿದು ಭಕ್ತಿ ಭಾವದಿಂದ ಬರಮಾಡಿಕೊಂಡರು. ಮದ್ದೂರಮ್ಮನ ದೇಗುಲದ ಆವರಣ ಸಿಡಿರಣ್ಣ ಆಗಮಿಸಿದ ನಂತರ ಸಿಡಿ ಉತ್ಸವ ನಡೆಯಿತು. ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಭಾಗಗಳಿಂದ ಆಗಮಿಸಿದ್ದ ಅಸಂಖ್ಯಾತ ಭಕ್ತರು ಸಿಡಿ ಉತ್ಸವದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಸಿಡಿ ಉತ್ಸವದ ಅಂಗವಾಗಿ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಭಕ್ತರಿಗೆ ಪಾನಕ, ಮಜ್ಜಿಗೆ ವಿತರಣೆ ಮಾಡಿದರು