ವಿಜೃಂಭಣೆಯ ಶ್ರೀ ವಿಶ್ವರೂಪ ದರ್ಶನ

11kls2
Published on

ಕಳಸ: ಇಲ್ಲಿಯ ಮೇಲಂಗಡಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸೋಮವಾರ ವಿಜೃಂಭಣೆಯ ಶ್ರೀ ವಿಶ್ವರೂಪ ದರ್ಶನ ನಡೆಯಿತು. ಪ್ರತಿ ವರ್ಷದಂತೆ ನಡೆಯುತ್ತಿರುವ ಈ ವಿಶ್ವರೂಪ ದರ್ಶನಕ್ಕೆ ಕಳಸ ಸುತ್ತ ಮುತ್ತಲಿನಿಂದ ನೂರಾರು ಭಕ್ತರು ಆಗಮಿಸಿ ವೆಂಕಟರಣನ ವಿಶ್ವರೂಪವನ್ನು ಕಣ್ತುಂಬಿಸಿಕೊಂಡರು. ಬೆಳಗ್ಗೆ 5 ಗಂಟೆಗೆ ನಡೆದ ಕಾರ್ಯಕ್ರಮ ಅಂಗವಾಗಿ ದೇವಸ್ಥಾನಕ್ಕೆ ವಿದ್ಯುತ್ ದೀಪಗಳಿಂದ ಅಲಂಕರಿಸಿ. ಹೂಗಳಿಂದ ಸಿಂಗರಿಸಲಾಗಿತ್ತು. ದೇವಸ್ಥಾನದ ಸುತ್ತಲೂ ದೀಪಗಳನ್ನು ಹಚ್ಚಿ ಇಡಲಾಗಿತ್ತು.ವಿವಿಧ ಬಗೆಯ ರಂಗೋಲಿಗಳು ವಿಶ್ವರೂಪದ ಅಂದ ಹೆಚ್ಚಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net