ವಿಜೃಂಭಣೆಯ ಶ್ರೀ ವಿದ್ಯಾಶಂಕರ ಸ್ವಾಮಿ ರಥೋತ್ಸವ

sri ratha
ಶೃಂಗೇರಿಯಲ್ಲಿ ಶ್ರೀ ವಿದ್ಯಾಶಂಕರ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
Published on

ಶೃಂಗೇರಿ: ಶ್ರೀ ವಿದ್ಯಾಶಂಕರ ಸ್ವಾಮಿ ರಥೋತ್ಸವ ಶನಿವಾರ ವಿಜೃಂಭಣೆಯಿಂದ ನೆರವೇರಿತು.

ಮಠದ ಲಾಂಛನಗಳು, ಆನೆಗಳು, ಅಶ್ವಗಳು, ಛತ್ರಿಚಾಮರಗಳು, ರಂಗವಲ್ಲಿ, ತಳಿರು ತೋರಣಗಳು ಉತ್ಸವಕ್ಕೆ ಮೆರುಗು ನೀಡಿದವು. ತಾಲೂಕಿನ ಭಕ್ತರು ಮುಖ್ಯಬೀದಿಯಲ್ಲಿ ಸಾಗಿ ಬಂದ ರಥೋತ್ಸವದಲ್ಲಿ ಪಾಲ್ಗೊಂಡರು. ಶ್ರೀ ಶಾರದಾ ಮಠದ ಹತ್ತನೇ ಜಗದ್ಗುರುಗಳಾದ ಶ್ರೀ ವಿದ್ಯಾಶಂಕರ ಸ್ವಾಮಿ ಭೂಗರ್ಭ ಸೇರಿ 690 ವರ್ಷಗಳು ಸಂದ ಹಿನ್ನೆಲೆಯಲ್ಲಿ ಮಠದಲ್ಲಿ ಮೂರು ದಿನಗಳ ಕಾಲ ಅವರ ಆರಾಧನಾ ಮಹೋತ್ಸವ ನೆರವೇರಿತು. ಈ ಹಿನ್ನೆಲೆಯಲ್ಲಿ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಅವರು ಶ್ರೀ ವಿದ್ಯಾಶಂಕರ ಸ್ವಾಮಿ ಅವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಶ್ರೀ ವಿದ್ಯಾಶಂಕರ ದೇಗುಲದಲ್ಲಿ ಶುಕ್ರವಾರ ರುದ್ರಾಭಿಷೇಕ, ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ಋತ್ವಿಜರು ನೆರವೇರಿಸಿದರು. ನ.10ರಂದು ತುಂಗಾ ನದಿಯಲ್ಲಿ ತೆಪ್ಪೋತ್ಸವ ನೆರವೇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net