ವಿಜೃಂಭಣೆಯ ಮಾರಮ್ಮ, ಸಿದ್ದಪ್ಪಾಜಿ, ದೊಡ್ಡಮ್ಮ ತಾಯಿ ಕೊಂಡೋತ್ಸವ

Published on

ಕೊಳ್ಳೇಗಾಲ: ತಾಲೂಕಿನ ದೊಡ್ಡಿಂದುವಾಡಿ ಗ್ರಾಮದಲ್ಲಿ ಕನಕಗಿರಿ ಗುಡ್ಡದ ಮಾರಮ್ಮ, ಶ್ರೀ ಸಿದ್ದಪ್ಪಾಜಿ, ದೊಡ್ಡಮ್ಮ ತಾಯಿ ಕೊಂಡೋತ್ಸವ ಸೋಮವಾರ ವಿಜೃಂಭಣೆಯಿಂದ ನಡೆಯಿತು.

ಗ್ರಾಮದ ಕನಕಗಿರಿಯ ಗುಡ್ಡದ ಮಾರಮ್ಮ ದೇವಾಲಯ ಆವರಣದಲ್ಲಿ ಸಿದ್ಧಪಡಿಸಿದ್ದ ಕೊಂಡವನ್ನು ದೇವರ ಗುಡ್ಡರು ಕಂಡಾಯಗಳು ಹಾಗು ಮಾರಮ್ಮನ ಸತ್ತಿಗಳನ್ನು ಹೊತ್ತು ಹಾಯ್ದರು. ಈ ವೇಳೆ ಬಸವ ಕೊಂಡ ಹಾಯ್ದದ್ದು ಎಲ್ಲರ ಗಮನ ಸೆಳೆಯಿತು.

ತಾಲೂಕಿನ ಸುತ್ತಮುತ್ತಲ ಗ್ರಾಮಗಳ ಜನರು ಕೊಂಡೋತ್ಸವವನ್ನು ವೀಕ್ಷಣೆ ಮಾಡಿದರು. ಬಳಿಕ ಭಕ್ತರು ಗುಡ್ಡದ ಮಾರಮ್ಮನ ದರ್ಶನ ಪಡೆದು ಹಣ್ಣು ಕಾಯಿ ಸಮರ್ಪಿಸಿ ಪೂಜಿ ಸಲ್ಲಿಸಿದರು.

ಹನೂರು ಶಾಸಕ ಎಂ.ಆರ್.ಮಂಜುನಾಥ್ ಹಾಗೂ ಬಿಜೆಪಿ ಮುಖಂಡ ಡಾ.ದತ್ತೇಶ್ ಕುಮಾರ್ ದೇವಾಲಯಕ್ಕೆ ಭೇಟಿ ನೀಡಿ ಪೂಜಾ ಕೈಂಕರ್ಯದಲ್ಲಿ ಭಾಗಿಯಾದರು. ಮುಖಂಡರಾದ ಡಿ.ಪಿ.ಗೋವಿಂದ, ಮಂಜೇಶ್‌ಗೌಡ, ವಿಜಯ್‌ಕುಮಾರ್, ಮಾದೇಶ್, ಶಿವರುದ್ರ, ನಾಗಭೂಷಣ್, ಶಿವಸ್ವಾಮಿ, ಬಲ್ಲೂ ನಿಂಗನಶೆಟ್ಟಿ, ಗೌಡಿಗೆರೆ ಶೆಟ್ಟಿ ,ರುದ್ರಮಾದ ಶೆಟ್ಟಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net